ವೀರಾಜಪೇಟೆ, ಏ. ೨೯: ವೀರಾಜಪೇಟೆ ನಾಗರಿಕ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಗರಿಕ ಸಮಿತಿ ಅಧ್ಯಕ್ಷ ಡಾ. ದುರ್ಗಾ ಪ್ರಸಾದ್ ವೀರಾಜಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ವಾಸಿಸುವ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.
ಹಲವು ಬಾರಿ ಪಟ್ಟಣ ಪಂಚಾಯಿತಿ ಯಲ್ಲಿ ಸಂಬAಧಿಸಿ ದವರಿಗೆ ನಾಗರಿಕ ಸಮಿತಿ ಮನವಿ ಸಲ್ಲಿಸಿದರು ಫಲಕಾರಿಯಾಗಲಿಲ್ಲ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ.
ಈ ಸಮಸ್ಯೆಗಳನ್ನು ಪರಿಹರಿಸು ವಂತೆ ಒತ್ತಾಯಿಸಿ ಹೋರಾಟ ನಡೆಸಲು ನಾಗರಿಕ ಸಮಿತಿ ವೀರಾಜ ಪೇಟೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸಂಘ ಸಂಸ್ಥೆಗಳು ತೀರ್ಮಾನಿಸಿವೆ.
ಪ್ರಮುಖವಾಗಿ ಇತ್ತೀಚೆಗೆ ಮನೆ ತೆರಿಗೆ, ನೀರಿನ ತೆರಿಗೆಯನ್ನು ಹೆಚ್ಚಿಸಿರುವುದು, ಮಾಂಸ-ಮೀನು ಮಾರಾಟ ವ್ಯವಸ್ಥೆಯಲ್ಲಿರುವ ಸಮಸ್ಯೆಗಳು, ಮಲೆತಿರಿಕೆ ಬೆಟ್ಟದಲ್ಲಿ ಅಡಿಪಾಯ ಇಲ್ಲದೇ ತಡೆಗೋಡೆ ಕಟ್ಟಿರುವುದು, ಮುಖ್ಯರಸ್ತೆ ದುರಸ್ತಿ ಸೇರಿದಂತೆ ಅನೇಕ ಸಮಸ್ಯೆಗಳು ಪ.ಪಂ.ಯಲ್ಲಿ ನಡೆಯುತ್ತಿದೆ ಎಂದು ಆರೋಪ ಮಾಡಿದರು.
ವೀರಾಜಪೇಟೆ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಅನಿಲ್ಕುಮಾರ್ ಮಾತನಾಡಿ, ಪಟ್ಟಣ ಪಂಚಾಯಿತಿ ಕಚೇರಿಗೆ ಪೀಠೋಪಕರಣಗಳನ್ನು ಖರೀದಿಸು ವಾಗ ದೊಡ್ಡ ರೀತಿಯ ಮೋಸ ನಡೆದಿದೆ ಎಂದು ವರದಿಯಾಗಿದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಹೇಳಿದರು. ರೀಯಾನ್ ಮಾತನಾಡಿ, ೭ನೇ ವಾರ್ಡ್ನಲ್ಲಿ ಹಲವು ವರ್ಷಗಳಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆ ಕಾಮಗಾರಿ ಯಾಗಬೇಕು ಮತ್ತು ನೀರಿನ ಸರಬರಾಜು ಸರಿಯಾಗಿ ಆಗುತ್ತಿಲ್ಲ ಎಂದು ಹೇಳಿದರು.
ವಕೀಲ ಸೋಮ ಲೋಕನಾಥ್ ಮಾತನಾಡಿ, ಪಟ್ಟಣ ಪಂಚಾಯಿತಿ ಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಾಗಿ ಮೇ ೧೧ ರಂದು ಪ್ರತಿಭಟನೆ ಹಮ್ಮಿಕೊಂಡಿ ರುವುದಾಗಿ ತಿಳಿಸಿದರು.
ಈ ಸಂದರ್ಭ ರಕ್ಷಣಾ ವೇದಿಕೆಯ ಸಂತೋಷ ಟಿ.ವಿ., ಜೊನೈದ್, ನಾಗರಿಕ ಸಮಿತಿಯ ಅಬ್ದುಲ್ ರೆಹಮಾನ್ ಹಾಜರಿದ್ದರು.