ಮಡಿಕೇರಿ, ಏ. ೩೦: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ, ಕೊಡಗು ಹಾಗೂ ಬ್ರಹ್ಮಶ್ರೀ ಮಿತ್ತೂರು, ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ಆಶ್ರಯದಲ್ಲಿ ಶಂಕರ ಜಯಂತಿ ಪ್ರಯುಕ್ತ ತಾ. ೬ರಂದು ಮಡಿಕೇರಿಯ ಶತಮಾನ ಭವನದ ಶ್ರೀ ಲಕ್ಷಿö್ಮÃನರಸಿಂಹ ಕಲ್ಯಾಣ ಮಂಟಪದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಬೆಳಗ್ಗೆ ೮ ರಿಂದ ‘ವೈಭವ' ತಂಡ ಕೊಡಗು, ವತಿಯಿಂದ ರುದ್ರಾಭಿಷೇಕ ಪೂರ್ವಕ ಶಿವಪೂಜೆ, ಶ್ರೀ ಮಜ್ಜಗದಗುರು ಶಂಕರಾಚಾರ್ಯರ ಶ್ರೀ ಗುರು ಪೂಜೆ, ಬೆಳಗ್ಗೆ ೧೦ ರಿಂದ ಸಾಮೂಹಿಕ ಉಪನಯನ, ಬೆಳಗ್ಗೆ ೯.೩೦ ರಿಂದ ೧೧.೩೦ರವರೆಗೆ ತಾಲೂಕುವಾರು ಭಜನಾ ಸ್ಪಧೆsೆð, ಪೂರ್ವಾಹ್ನ ೧೧.೩೦ ರಿಂದ ೧೨.೩೦ ರವರೆಗೆ ಪುತ್ತೂರು ಅಂಬಿಕಾ ಪದವಿ ವಿದ್ಯಾಲಯದ ಪ್ರಾಚಾರ್ಯ ವಿನಾಯಕ ಭಟ್ಟರಿಂದ ಉಪನ್ಯಾಸ, ೧೨.೩೦ಕ್ಕೆ ಮಹಾಮಂಗಳಾರತಿ ಹಾಗೂ ಶ್ರೀ ಶಂಕರ ರಚಿತ ಸ್ತೋತ್ರ ಪಠಣ, ಅಪರಾಹ್ನ ೧ಕ್ಕೆ ಪ್ರಸಾದ ಭೋಜನ ನಡೆಯಲಿದೆ.
ಉಪನಯನಕ್ಕೆ ವಟುಗಳ ಹೆಸರನ್ನು ತಾ. ೭ರೊಳಗೆ ಕಚೇರಿಯಲ್ಲಿ ನೀಡುವುದು.