*ಗೋಣಿಕೊಪ್ಪ, ಏ. ೨೯: ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದ ಮಂದತವ್ವ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ರೂ. ೧೦ ಲಕ್ಷ ಅನುದಾನದಲ್ಲಿ ಮಂದತವ್ವ ದೇವಸ್ಥಾನಕ್ಕೆ ಹೋಗುವ ರಸ್ತೆ ಕಾಮಗಾರಿ ನಡೆಯಲಿದೆ ಎಂದು ಶಾಸಕರು ತಿಳಿಸಿದರು. ಕಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮಾಡ ರಶ್ಮಿ, ಸದಸ್ಯ ಮಂಜು, ಮಂದತವ್ವ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಾಚಿಮಾಡ ರವೀಂದ್ರ, ದೇವ ಭಂಡಾರದ ಕಾರ್ಯದರ್ಶಿ ಮಾಚಂಗಡ ದಿಲನ್ ಮೊಣ್ಣಪ್ಪ, ಶಕ್ತಿಕೇಂದ್ರ ಉಪಾಧ್ಯಕ್ಷ ತೀತಮಾಡ ಜಯ, ಬೂತ್ ಅಧ್ಯಕ್ಷ ಮಲ್ಲಮಾಡ ಈಶ್ವರ್, ಗಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕುಡಿಯಂಗಡ ಗಿರೀಶ್ ಗಣಪತಿ, ಮಾಜಿ ಅಧ್ಯಕ್ಷ ಕಾಡ್ಯಮಾಡ ಭರತ್, ಶಿಲ್ಪ್ಪಾ ಅಪ್ಪಣ್ಣ, ಅರುಣ್ ತಾಣಚ್ಚಿರ ಹಾಗೂ ಗ್ರಾಮಸ್ಥರು ಹಾಜರಿದ್ದರು.