ಹೆಬ್ಬಾಲೆ, ಏ. ೨೮: ಸಾಮಾಜಿಕ ಪ್ರಜಾಪ್ರಭುತ್ವದ ಪುನರ್ ಪ್ರತಿಷ್ಠಾಪನೆಯೂ ಜರೂರಿದ್ದು, ಈ ಪ್ರಕ್ರಿಯೆಯಲ್ಲಿ ಸಂವಿಧಾನದ ತಾತ್ವಿಕ ಆಯಾಮಗಳು, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಆಯಾಮಗಳಿಂದ ಅನಾವರಣ ಗೊಳ್ಳಬೇಕಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಪ್ರೊ. ಜೆ. ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕ ಮತ್ತು ರಾಜ್ಯಶಾಸ್ತç ವಿಭಾಗದ ಸಂಯುಕ್ತ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ. ೧೩೧ನೇ ಜನ್ಮ ದಿನೋತ್ಸವದ ಅಂಗವಾಗಿ ಸಾಮಾಜಿಕ ಪ್ರಜಾಪ್ರಭುತ್ವ ಪುನರ್ ನಿರ್ಮಾಣದಲ್ಲಿ ಅಂಬೇಡ್ಕರ್ ರವರ ವಿಚಾರಧಾರೆಗಳು ಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ರವರ ದೃಷ್ಟಿಕೋನದ ಪ್ರಜಾಪ್ರಭುತ್ವವನ್ನು ವಿಶ್ಲೇಷಿಸುತ್ತಾ ಮಹಿಳೆ ಸಶಕ್ತಳಾಗುವ ಮೂಲಕ ಸಾಮಾಜಿಕ ಪ್ರಜಾಪ್ರಭುತ್ವದ ಸಾರ್ಥಕತೆಯನ್ನು ಪಡೆಯಲು ಶಿಕ್ಷಣ ಮೂಲಮಂತ್ರವೆAದು ಒತ್ತಿ ಹೇಳಿದರು.
ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕ ಪ್ರೊ. ಕೆ.ಎಸ್. ಚಂದ್ರಶೇಖರಯ್ಯ, ಕಾರ್ಯಕ್ರಮ ಸಂಚಾಲಕ ರಾಜ್ಕುಮಾರ್ ಎಸ್. ಮೇಟಿ ಮಾತನಾಡಿದರು.
ತೊರೆನೂರು ಗ್ರಾ.ಪಂ.ಮಾಜಿ ಅಧ್ಯಕ್ಷ ದೇವರಾಜ್, ರಾಜ್ಯಶಾಸ್ತç ವಿಭಾಗದ ಉಪನ್ಯಾಸಕ ಡಾ. ದೊಡ್ಡರಾಜು, ಜೀವರಾಸಾಯನ ಶಾಸ್ತç ವಿಭಾಗದ ಅಧ್ಯಕ್ಷ ಕೆ.ಕೆ. ಧರ್ಮಪ್ಪ, ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಅಧ್ಯಕ್ಷೆ ಡಾ. ಬಿ.ಎಸ್. ಗುಣಶ್ರೀ, ಯೋಗ ವಿಜ್ಞಾನ ವಿಭಾಗದ ಸಂಯೋಜಕ ಡಾ. ಜೆ. ಶ್ಯಾಮಸುಂದರ, ಪ್ರಾಧ್ಯಾಪಕರಾದ ಡಾ. ಐ.ಕೆ. ಮಂಜುಳಾ, ಡಾ. ಎ.ಹೆಚ್. ಸ್ನೇಹರಾಣಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಬಿ.ಎಸ್. ಮಮತಾ ನಿರೂಪಿಸಿದರು. ಸಿ.ಎಸ್. ತಾರಾ ವಂದಿಸಿದರು.
ಈ ಸಂದರ್ಭ ವಿವಿಧ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.