ಶನಿವಾರಸಂತೆ, ಏ. ೨೮: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ವಿಜಯ ವಿನಾಯಕ ದೇವಸ್ಥಾನದ ೭ನೇ ವಾರ್ಷಿಕೋತ್ಸವ ಮತ್ತು ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮ ಮಂಗಳವಾರ ನಡೆಯಿತು. ಬೆಳಿಗ್ಗೆ ೯ ಗಂಟೆಯಿAದ ದೇವರ ಪ್ರಾರ್ಥನೆ, ಕಲಶ ಪೂಜೆ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ ಪೂಜಾ ಕಾರ್ಯಗಳು ನಡೆಯಿತು. ಬೆಳಿಗ್ಗೆ ೧೦ ಗಂಟೆಯಿAದ ಶ್ರೀ ವಿಜಯ ವಿನಾಯಕ ಸ್ವಾಮಿಗೆ ೧೦೮ ಸಿಯಾಳಾಭಿಷೇಕ ಮುಂತಾದ ಪೂಜಾ ವಿಧಿ ವಿಧಾನ ನೆರವೇರಿಸಲಾಯಿತು. ಮಧ್ಯಾಹ್ನ ೧೨ ಗಂಟೆಯಿAದ ಮಹಾಪೂಜೆ ಕಾರ್ಯ, ಮಹಾ ಮಂಗಳಾರತಿ ಮತ್ತು ಭಕ್ತಾದಿಗಳಿಗೆ ತೀರ್ಥ ಪ್ರಸಾದ ಪೂಜಾ ವಿಧಿ ವಿಧಾನ ನೆರವೇರಿಸಲಾಯಿತು. ಮಧ್ಯಾಹ್ನ ೧೨ ಗಂಟೆಯಿAದ ಮಹಾಪೂಜೆ ಕಾರ್ಯ, ಮಹಾ ಮಂಗಳಾರತಿ ಮತ್ತು ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.

ಪುತ್ತೂರಿನ ಕೆಮ್ಮಿಂಜೆಯ ವೇದಮೂರ್ತಿ ತಂತ್ರಿಗಳಾದ ಸುಬ್ರಮಣ್ಯ ಬಳ್ಳಕ್ಕುರಾಯ ಮತ್ತು ವಿಜಯ ವಿನಾಯಕ ದೇವಸ್ಥಾನದ ಅರ್ಚಕ ಮಂಜುನಾಥ ಶರ್ಮ ಅರ್ಚಕರ ನೇತೃತ್ವದಲ್ಲಿ ಪೂಜಾ ಕಾರ್ಯ ನಡೆಯಿತು. ಪೂಜಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಕಳಸ ಹೊತ್ತ ಮಹಿಳೆಯರು ಮತ್ತು ಭಕ್ತರು ಪಟ್ಟಣದ ರಾಮ ಮಂದಿರ ಸಮೀಪದಿಂದ ಮುಖ್ಯ ರಸ್ತೆ ಮೂಲಕವಾಗಿ ಶ್ರೀ ವಿಜಯ ವಿನಾಯಕ ದೇವಸ್ಥಾನಕ್ಕೆ ಮತ್ತು ವಿಜಯ ವಿನಾಯಕ ದೇವಸ್ಥಾನದ ಅರ್ಚಕ ಮಂಜುನಾಥ ಶರ್ಮ ಅರ್ಚಕರ ನೇತೃತ್ವದಲ್ಲಿ ಪೂಜಾ ಕಾರ್ಯ ನಡೆಯಿತು. ಬೆಳಿಗ್ಗೆ ಕಳಸ ಹೊತ್ತ ಮಹಿಳೆಯರು ಮತ್ತು ಭಕ್ತರು ಪಟ್ಟಣದ ರಾಮ ಮಂದಿರ ಸಮೀಪದಿಂದ ಮುಖ್ಯ ರಸ್ತೆ ಮೂಲಕವಾಗಿ ಶ್ರೀ ವಿಜಯ ವಿನಾಯಕ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಬಂದು ಕಳಸಗಳನ್ನು ದೇವಸ್ಥಾನದಲ್ಲಿಟ್ಟು ಪೂಜಿಸಿದರು. ಸಂಜೆ ೭ರಿಂದ ದೇವಸ್ಥಾನದಲ್ಲಿ ರಂಗಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಮತ್ತು ಸಂಜೆ ಭಕ್ತಾದಿಗಳಿಗೆ ದೇವಸ್ಥಾನ ಸಮಿತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.