*ಗೋಣಿಕೊಪ್ಪ, ಏ. ೨೮: ಮರೆನಾಡ್ ಕೊಡವ ಕುಟುಂಬಗಳ ನಡುವೆ ಆಯೋಜಿಸಿರುವ ಮರೆನಾಡ್ ಕೊಡವಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ರಾಜ್ಯ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಅವರು ರಾಜ್ಯ ಪಶ್ಚಿಮಘಟ್ಟ ಅರಣ್ಯ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅವರು ಎಸೆದ ಚೆಂಡಿಗೆ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು.
ಬಿರುನಾಣಿ, ಮರೆನಾಡ್ ಪ್ರೌಢಶಾಲಾ ಮೈದಾನದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ೧೪ ತಂಡಗಳ ನಡುವೆ ನಡೆಯಲಿದೆ.
ಬಿರುನಾಣಿ, ತೆರಾಲು, ಬಾಡಗರಕೇರಿ, ಪರಕಟಕೇರಿ ಗ್ರಾಮಗಳ ಕೊಡವ ಕುಟುಂಬಸ್ಥರು ಈ ಕ್ರೀಡೆಯಲ್ಲಿ ಭಾಗವಹಿಸಲಿದೆ.
ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು ಗ್ರಾಮೀಣ ಪ್ರದೇಶಗಳಲ್ಲಿನ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಕ್ರೀಡಾಕೂಟಗಳು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ನಡೆಯಬೇಕಾಗಿದೆ. ಗ್ರಾಮಗಳಲ್ಲಿ ಕ್ರೀಡೆ ಇನ್ನಿತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಅಂರ್ರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಸ್ವತಃ ಗ್ರಾಮಕ್ಕೆ ಕೀರ್ತಿ ತರುವ ಕಾರ್ಯ ಯುವ ಸಮುದಾಯದ ಗುರಿಯಾಗಬೇಕೆಂದು ತಿಳಿಸಿದರು.
ಪ್ರಕೃತಿ ವಿಕೋಪ, ಕೊರೊನಾ ದಿನಗಳಿಂದಾಗಿ ಕಳೆದ ಮೂರು ವರ್ಷಗಳು ಕ್ರೀಡಾಕೂಟಗಳು ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಹಳಷ್ಟು ಕ್ರೀಡಾಪ್ರೇಮಿಗಳಿಗೆ ನಿರಾಶೆ ಉಂಟಾಗಿದ್ದಲ್ಲದೇ, ಯುವ ಸಮುದಾಯವು ತಮ್ಮ ಪ್ರತಿಭೆಯನ್ನು ಹೊರಗಿಡುವಲ್ಲಿ ವಂಚಿತರಾಗಿದ್ದಾರೆ. ಕೊರೊನಾ ನಾಲ್ಕನೇ ಅಲೆಯ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯ ನಿಯಮವನ್ನು ಹೊರಡಿಸಿದೆ. ಪ್ರತಿಯೊಬ್ಬರು ನಿಯಮವನ್ನು ಪಾಲಿಸುವ ಮೂಲಕ ಮುಂದಾಗುವ ಆತಂಕ ಅನಾಹುತವನ್ನು ತಪ್ಪಿಸುವ ಪ್ರಯತ್ನಕ್ಕೆ ಬದ್ಧರಾಗಿರಬೇಕೆಂದು ಸಲಹೆ ನೀಡಿದರು.
ಪಶ್ಚಿಮಘಟ್ಟ ಅರಣ್ಯ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಮಾತನಾಡಿ, ಸಮುದಾಯದವರು ಒಂದೆಡೆ ಸೇರುವುದರಿಂದ ಅವರ ಬಲವರ್ಧನೆ ಸಾಧ್ಯವಾಗುತ್ತದೆ. ಬಿರುನಾಣಿ ಭಾಗದ ಗ್ರಾಮಸ್ಥರ ಅನುಕೂಲಕ್ಕಾಗಿ ಕೂಟಿಯಾಲ ಸೇತುವೆ ನಿರ್ಮಾಣ ಯೋಜನೆಗೆ ಅಡ್ಡಿಯಾಗಿದ್ದ ಕಾನೂನು ತೊಡಕುಗಳನ್ನು ಸರಿಪಡಿಸುವ ಕಾರ್ಯ ಹಂತಹAತವಾಗಿ ನಿವಾರಣೆಯಾಗುತ್ತಿದೆ. ಮಳೆಗಾಲ ಕಳೆದ ನಂತರ ಕಾಮಗಾರಿ ಪ್ರಾರಂಭಿಸಲು ಟೆಂಡರ್ ಕರೆಯಲಾಗುವುದು. ಈಗಾಗಲೇ ಸೇತುವೆ ನಿರ್ಮಾಣಕ್ಕೆ ರೂ. ೨ ಕೋಟಿ ೨೦ ಲಕ್ಷ ಅನುದಾನ ಬಿಡುಗಡೆಯಾಗಿದೆ. ಅಭಿವೃದ್ಧಿ ಕಾರ್ಯಕ್ಕೆ ಪರಿಸರ ನಾಶ ಎಂಬ ವಿಚಾರಗಳನ್ನು ಅಡ್ಡಿಪಡಿಸಿ ಕಾಮಗಾರಿಗೆ ತಡೆಯೊಡ್ಡುವುದು ಉತ್ತಮ ಬೆಳವಣಿಗೆಯಲ್ಲ. ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಬಹುಮತದ ಬೆಂಬಲ ವ್ಯಕ್ತಪಡಿಸಬೇಕೆಂದು ತಿಳಿಸಿದರು.
ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಸದಸ್ಯ ತೀತಮಾಡ ಲಾಲ ಭೀಮಯ್ಯ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕುಂಞAಗಡ ಅರುಣ್ ಭೀಮಯ್ಯ, ಹಾಕಿಪಟು ಕಾಳಿಮಾಡ ಮುತ್ತಣ್ಣ, ಬಿರುನಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ರಾಜೇಶ್, ಸದಸ್ಯೆ ರೀನಾ, ಕಳಕಂಡ ಕುಶಾಲಪ್ಪ, ವಿನು, ಕೀಕಣಮಾಡ ಮನು ಮತ್ತಿತರರು ಹಾಜರಿದ್ದರು. ಕಾಯಪಂಡ - ನೆಲ್ಲೀರ ಕುಟುಂಬದ ನಡುವೆ ಉದ್ಘಾಟನಾ ಪಂದ್ಯ ನಡೆಯಿತು.