ಮಡಿಕೇರಿ, ಏ. ೨೮: ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಒಂದಾಗಿರುವ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಸನ್ನಿಧಿಯಲ್ಲಿ ಭಕ್ತಜನ ಸಂಘದ ಮೂಲಕ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಒಂದೊAದಾಗಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತಿದೆ.
ಭಕ್ತ ಜನ ಸಂಘಕ್ಕೆ ದಾನಿಗಳ ಮೂಲಕ ದೊರೆತಿರುವ ಸಹಾಯದ ಮೂಲಕ ಈ ಕೆಲಸಗಳನ್ನು ನಡೆಸಲಾಗುತ್ತಿದೆ. ಈ ಹಿಂದೆ ದೇವಾಲಯದ ಎರಡು ಬದಿಯಲ್ಲಿ ವಾಹನ ನಿಲುಗಡೆಗೆಂದು ಸಮತಟ್ಟುಗೊಳಿಸಲಾಗಿದ್ದ ವಿಶಾಲ ಪ್ರದೇಶವನ್ನು ಇದೀಗ ಡಾಂಬರೀಕಣಗೊಳಿಸಲಾಗಿದೆ. ಈ ಸ್ಥಳದ ಉದ್ಘಾಟನೆಯನ್ನು ನಿನ್ನೆ ನೆರವೇರಿಸಲಾಯಿತು. ಇದಲ್ಲದೆ ೧೯೧೮ರಲ್ಲಿ ಪ್ರಾರಂಭಗೊAಡಿರುವ ಭಕ್ತಜನ ಸಂಘ ೧೦೦ ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ದೇವಾಲಯದ ಹಿಂಬದಿಯಲ್ಲಿ ವಿಶಾಲವಾದ ಭೋಜನಗೃಹವನ್ನು ನಿರ್ಮಿಸಲಾಗಿದೆ.
ಇದರ ಕೆಲಸ ಅಂದಾಜು ರೂ. ೪೦ ಲಕ್ಷ ವೆಚ್ಚದ್ದಾಗಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಇದಕ್ಕೆ ಹೊಂದಿಕೊAಡAತೆ ವ್ಯವಸ್ಥಾಪನಾ ಸಮಿತಿ ಹಾಗೂ ಭಕ್ತಜನ ಸಂಘದ ಕಚೇರಿಯನ್ನೂ ನಿರ್ಮಿಸಲಾಗಿದೆ. ಇವುಗಳ ಕೆಲಸ ಸ್ವಲ್ಪ ಬಾಕಿ ಉಳಿದಿದ್ದು, ಸದ್ಯದಲ್ಲಿ ಇದರ ಉದ್ಘಾಟನೆಯನ್ನೂ ನೆರವೇರಿಸಲಾಗುವದು ಎಂದು ಭಕ್ತಜನ ಸಂಘದ ಪ್ರಮುಖರು ತಿಳಿಸಿದ್ದಾರೆ.
ಇದೀಗ ಡಾಂಬರೀಕರಣಗೊAಡು ಉದ್ಘಾಟನೆಗೊಂಡಿರುವ ವಾಹನ ನಿಲುಗಡೆ ಸ್ಥಳವನ್ನು ರೂ. ೯.೪೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಸ್ಥಳ ಸುಮಾರು ೧,೭೨೯ ಚದರಮೀಟರ್ನಷ್ಟು ವಿಸ್ತೀರ್ಣ ಹೊಂದಿದ್ದು, ಸುಮಾರು ೧೦೦ ವಾಹನಗಳ ನಿಲುಗಡೆಗೆ ಅವಕಾಶವಿದೆ.
ನಿನ್ನೆ ನಡೆದ ಉದ್ಘಾಟನೆಯ ಸಂದರ್ಭ ಭಕ್ತಜನಸಂಘದ ಅಧ್ಯಕ್ಷ ಕಾಂಡAಡ ಬಿ. ಜೋಯಪ್ಪ, ಉಪಾಧ್ಯಕ್ಷ ಪರದಂಡ ಡಾಲಿ, ಕಾರ್ಯದರ್ಶಿ ಬೊಳಂದAಡ ಲಲಿತಾ ನಂದಕುಮಾರ್, ನಿರ್ದೇಶಕರಾದ ಕಲಿಯಂಡ ಹ್ಯಾರಿ ಮಂದಣ್ಣ, ಕೋಡಿಮಣಿಯಂಡ ಸುರೇಶ್, ಬಡಕಡ ಸುರೇಶ್, ಬಾಚಮಂಡ ಲವ ಚಿಣ್ಣಪ್ಪ, ಕಲಿಯಂಡ ಸುನಂದ, ನಾಟೋಳಂಡ ದಿಲೀಪ್, ಉದಿಯಂಡ ಸುರ ನಾಣಯ್ಯ, ಪ್ರಧಾನ ಅರ್ಚಕ ಕುಶಭಟ್, ಕಾರ್ಯನಿರ್ವಾಹಕರಾದ ಕಂಬೇಯAಡ ಬೊಳ್ಳಪ್ಪ, ಕಂಬೇಯAಡ ಗಣೇಶ್, ಪಾರುಪತ್ತೆಗಾರರಾದ ಪರದಂಡ ಪ್ರಿನ್ಸ್ ತಮ್ಮಪ್ಪ ಹಾಜರಿದ್ದರು.