ಗೋಣಿಕೊಪ್ಪಲು,ಏ.೨೮: ತನ್ನ ಪೋಷಕರನ್ನು ಕಳೆದುಕೊಂಡು ತಬ್ಬಲಿಯಾಗಿರುವ ಸುಮಾರು ೪೦ ವರ್ಷ ಪ್ರಾಯದ ವಿಶೇಷ ಚೇತನ ಯುವತಿಗೆ ಭವಿಷ್ಯದಲ್ಲಿ ಹಾರೈಕೆಗೆ ಪೂರಕ ಸಹಕಾರ ನೀಡುವದಾಗಿ ಹೈಕೋರ್ಟ್ ಹಿರಿಯ ವಕೀಲರು,ರಾಜ್ಯ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ಬಿ.ಶೆಟ್ಟಿಗೇರಿ ಸರ್ಕಾರಿ ಶಾಲಾ ಸಮೀಪದ ದಿ.ಚೇಂದಿರ ಬೆಳ್ಳಿಯಪ್ಪ ಹಾಗೂ ದಿ.ಸಿ.ಬಿ.ನಂಜಮ್ಮ ಅವರ ಪುತ್ರಿ ಸಿ.ಬಿ.ರಶ್ಮಿ(೪೦)ಇತ್ತೀಚೆಗೆ ತಾಯಿಯನ್ನೂ ಕಳೆದುಕೊಂಡ ನಂತರ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು.
ಮೂರು ತಿಂಗಳಿನ ಹಿಂದೆ ತಾಯಿ ನಿಧನ ನಂತರ ಚಿಕ್ಕಪ್ಪ ಸುರೇಶ್ ಕುಮಾರ್ ಹಾಗೂ ಚಿಕ್ಕಮ್ಮ ಕೆ.ಸಿ.ಬೋಜಮ್ಮ ಯುವತಿಯ ಹಾರೈಕೆ ವಹಿಸಿದ್ದರು. ಆರ್ಥಿಕವಾಗಿ ಕುಟುಂಬ ಸಂಕಷ್ಟದಲ್ಲಿರುವ ಹಿನ್ನೆಲೆ ಬಿ.ಶೆಟ್ಟಿಗೇರಿ ಗ್ರಾ.ಪಂ.ಸದಸ್ಯ ಕೊಲ್ಲೀರ ಬೋಪಣ್ಣ ಅವರ ಮನವಿ ಮೇರೆಗೆ ಎ.ಎಸ್.ಪೊನ್ನಣ್ಣ ಭಾನುವಾರ ನಿವಾಸಕ್ಕೆ ಭೇಟಿ ನೀಡಿ ವೈಯಕ್ತಿಕ ಆರ್ಥಿಕ ನೆರವು ನೀಡಿದರಲ್ಲದೆ ಮೈಸೂರು ಅಥವಾ ಬೆಂಗಳೂರಿನಲ್ಲಿ ಚಿಕಿತ್ಸೆಗೆ ಸಹಕಾರ ನೀಡುವದಾಗಿ ಹೇಳಿದರು.
ವಿಶೇಷಚೇತನ ಯುವತಿಗೆ ಮಾಸಿಕ ರೂ.೧೪೦೦ ಪಿಂಚಣಿ ಬರುತ್ತಿದ್ದು ಕಳೆದ ಒಂದು ವರ್ಷದಿಂದ ತಡೆಹಿಡಿಯಲಾಗಿದೆ ಎಂದು ಕೆ.ಸಿ.ಬೋಜಮ್ಮ ಮಾಹಿತಿ ನೀಡಿದರು. ಈ ಬಗ್ಗೆ ಸಂಬAದಿಸಿದ ಇಲಾಖೆಯೊಂದಿಗೆ ವ್ಯವಹರಿಸಿ ಮಾಸಿಕ ಪಿಂಚಣಿಗೆ ವ್ಯವಸ್ಥೆ ಮಾಡಿಕೊಡಲಾಗುವದು ಎಂದು ಪೊನ್ನಣ್ಣ ತಿಳಿಸಿದರು.
ಭೇಟಿ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕುಸುಮಾ ಜೋಯಪ್ಪ,ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಕಾಂಗ್ರೆಸ್ ವಲಯಾಧ್ಯಕ್ಷ ತೀತಿಮಾಡ ಸದನ್,ಚೇರಂಡ ಮೋಹನ್, ಮಾಜಿ ಗ್ರಾ.ಪಂ.ಸದಸ್ಯ ಚೇಂದಿರ ಪ್ರಕಾಶ್,ದಿನು, ಕಾಡ್ಯಮಾಡ ಅಜಿತ್, ರಾಯ್, ಅಪ್ಪಂಡೇರAಡ ವಿಶ್ವನಾಥ್,ಕೊಲ್ತಂಡ ರಾಜ,ಕರ್ತೂರ ರನ್ನು, ಚೇಂದಿರ ಸ್ವಾತಿ ಮುಂತಾದವರು ಇದ್ದರು.