ಶನಿವಾರಸಂತೆ, ಏ. ೨೮: ಶನಿವಾರಸಂತೆ ಪ್ರಜ್ಞಾ ಭಾರತ್ ಗ್ಯಾಸ್ ಡಿಸ್ಟಿçಬ್ಯೂಟರ್ ವಿತರಕರು ಹಾಗೂ ಮಾಲೀಕರುಗಳಾದ ಹೆಚ್.ಪಿ. ಮೋಹನ್ ಮತ್ತು ಎಸ್.ವಿ. ಪರೀಕ್ಷೀತ್ ಅವರುಗಳು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಶನಿವಾರಸಂತೆ ಸುತ್ತಮುತ್ತಲಿನ ಫಲಾನುಭವಿಗಳಾದ ಜಯಮ್ಮ, ಸೌಮ್ಯ, ರೇಖಾ, ನಾಗಮಣಿ ಇತರ ಒಟ್ಟು ೧೭ ಮಂದಿ ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಗ್ಯಾಸ್ ಸಂಪರ್ಕ ಸೆಟ್ಗಳನ್ನು ವಿತರಣೆ ಮಾಡಿದರು.
ಹೆಚ್.ಪಿ. ಮೋಹನ್ ಮಾತನಾಡಿ, ಶನಿವಾರಸಂತೆ ಸುತ್ತಮುತ್ತಲಿನ ಜನತೆ ಈ ಯೋಜನೆಯಡಿಯಲ್ಲಿ ಗ್ಯಾಸ್ ಸಂಪರ್ಕವನ್ನು ಉಚಿತವಾಗಿ ಪಡೆಯಲು ಬಿ.ಪಿ.ಎಲ್. ರೇಷನ್ ಕಾರ್ಡ್ ಕಡ್ಡಾಯವಾಗಿರಬೇಕು. ಈ ಯೋಜನೆ ಸೀಮಿತ ಅವಧಿವರೆಗೆ. ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.