ವೀರಾಜಪೇಟೆ, ಏ. ೨೮: ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದಲ್ಲಿರುವ ಶ್ರೀ ಅಯ್ಯಪ್ಪ ಭಗವತಿ ದೇವಸ್ಥಾನದ ವಾರ್ಷಿಕ ಮಹೋತ್ಸವವನ್ನು ತಾ.೧೫ ರಿಂದ ತಾ. ೨೫ ರವರೆಗೆ ಹತ್ತು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಬೇಟೋಳಿ, ಹೆಗ್ಗಳ, ಆರ್ಜಿ ಮೂರು ಗ್ರಾಮಸ್ಥರು ಸೇರಿ ನಡೆಸುವ ಉತ್ಸವವು ತಾ. ೧೫ ರಂದು ಪ್ರಾರಂಭಗೊAಡು ತಾ. ೨೩ ಪಟ್ಟಣಿ ಹಾಗೂ ತಾ. ೨೪ ರಂದು ಎತ್ತುಪೋರಾಟ ದೇವರ ದೊಡ್ಡ ಹಬ್ಬದಂದು ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದು ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನಂತರ ಪ್ರಸಾದ ವಿನಿಯೋಗ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಉತ್ಸವದ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಅಮ್ಮಣಕುಟ್ಟಂಡ ಜಿ. ಬೋಪಣ್ಣ, ದೇವತಕ್ಕರಾದ ಪೋರೇರ ಗಣಪತಿ, ಊರುತಕ್ಕರಾದ ಅಚ್ಚಪಂಡ ಮುತ್ತಣ್ಣ ಹಾಗೂ ಆಡಳಿತ ಮಂಡಳಿಯ ಪೋರೇರ ಬಿದ್ದಪ್ಪ, ಅಚ್ಚಪಂಡ ಮಹೇಶ್ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.