ಗೋಣಿಕೊಪ್ಪ ವರದಿ, ಏ. ೨೮: ಪೊರುಕೊಂಡ ಕ್ರಿಕೆಟ್ ಕಪ್ ಟೂರ್ನಿಯ ಅಧಿಕೃತ ಟೈಸ್ ಅನ್ನು ಚೆಂಬೆಬೆಳ್ಳೂರು ಭದ್ರಕಾಳಿ ದೇವಸ್ಥಾನದಲ್ಲಿ ಕುಟುಂಬದ ಅಧ್ಯಕ್ಷ ಪಿ.ಯು. ಬೋಪಣ್ಣ ಗುರುವಾರ ಬಿಡುಗಡೆಗೊಳಿಸಿದರು.

೧೯೨ ತಂಡಗಳು ಟೂರ್ನಿಯಲ್ಲಿ ಹೆಸರು ನೋಂದಾಯಿಸಿಕೊAಡಿದ್ದು, ಮೇ ೧ ರಿಂದ ಮೇ ೧೮ ರವರೆಗೆ ಪಂದ್ಯ ನಡೆಯಲಿದೆ ಎಂದರು. ಅಧಿಕೃತವಾಗಿ ಕುಟುಂಬದಿAದ ಟೈಸ್ ಬಿಡುಗಡೆಗೊಳಿಸಲಾಗಿದೆ. ಟೈಸ್ ತಯಾರಿ ವೇಳೆ ಪ್ರಾರಂಭಿಕ ಹಂತದ ಪೂರ್ಣಗೊಳ್ಳದ ಟೈಸ್ ಸಾಮಾಜಿಕ ಜಾಲತಾಣದ ಮೂಲಕ ಯಾರೋ ಹರಿಬಿಟ್ಟಿದ್ದರು. ಇದರಿಂದ ಕ್ರೀಡಾಭಿಮಾನಿಗಳು, ಕುಟುಂಬ ತಂಡಗಳು ಗೊಂದಲಕ್ಕೆ ಒಳಗಾಗಬಾರದು. ಅಧೀಕೃತ ಟೈಸ್ ಎಲ್ಲ ತಂಡಗಳಿಗೂ ತಲುಪಿಸಲಾಗುವುದು ಎಂದರು.

ಕುಟುಂಬದ ಪಟ್ಟೆದಾರ ಪಿ.ಎಂ. ಜೋಯಪ್ಪ, ಕಾರ್ಯದರ್ಶಿ ಪಿ.ಬಿ. ಸುನಿಲ್, ಖಜಾಂಚಿ ದಿಲಿಪ್, ನಿರ್ದೇಶಕ ಸಾಬ ಯಶಂತ, ಸದಸ್ಯರಾದ ಜೆ. ತಿಮ್ಮಯ್ಯ, ಬಿನ್ನಿ ಪೂಣಚ್ಚ, ನಿಖಿಲ್ ಗಣಪತಿ, ಜಾಲು ತಿಮ್ಮಯ್ಯ ಇದ್ದರು.