ಮಡಿಕೇರಿ, ಏ. ೨೮: ಶ್ರೀ ಹಂಸಕಲಾ ಗಡಿನಾಡು ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಸಾಂಸ್ಕೃತಿ ಕೋತ್ಸವ - ೨೦೨೨ ಕಾರ್ಯಕ್ರಮ ವನ್ನು ನಗರದ ರಾಣಿಪೇಟೆಯ ಅಂಬೇಡ್ಕರ್ ಬಡಾವಣೆಯಲ್ಲಿ ತಾ. ೨೫ ರಂದು ಏರ್ಪಡಿಸಲಾಯಿತು.

ಸಾಂಸ್ಕೃತಿಕೋತ್ಸವ ಅಂಗವಾಗಿ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೆರವಣಿಗೆ ನೃತ್ಯಗಳು, ಡೊಳ್ಳುಕುಣಿತ, ಕಂಸಾಳೆ ನೃತ್ಯ, ಭರತನಾಟ್ಯ, ಯಕ್ಷಗಾನ, ಬುಡಕಟ್ಟು ನೃತ್ಯ, ದೇವಿ ನೃತ್ಯ, ಕನ್ನಡ ಜಾನಪದ ನೃತ್ಯ, ಹಳ್ಳಿ ಗಾಡಿನ ವಿಷಯಾಧಾರಿತ ಮಹಿಳಾ ನೃತ್ಯ, ದೇಶಭಕ್ತಿ ಗೀತೆ ನೃತ್ಯಗಳಲ್ಲಿ ಹಲವಾರು ಕಲಾವಿದರು ಭಾಗವಹಿಸಿ ಮನರಂಜಿಸಿದರು. ಹಂಸಕಲಾ ಗಡಿ ನಾಡು ಸಾಂಸ್ಕೃತಿಕ ಕಲಾ ವೇದಿಕೆಯ ಅಧ್ಯಕ್ಷ ಶಿವರಾಜ್, ಮುಖ್ಯ ಕಾರ್ಯದರ್ಶಿ ಉದಯ ಕುಮಾರ್, ಖಜಾಂಚಿ ಸಂದೀಪ್ ಹೆಚ್.ಆರ್. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ್, ನಗರಸಭಾ ಸದಸ್ಯೆ ಕಲಾವತಿ, ರಾಮ ಸೇವಾ ಸಮಿತಿ ಅಧ್ಯಕ್ಷ ತಿಮ್ಮಯ್ಯ, ವಿಕಾಸ್ ಜನಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ಹೆಚ್.ಕೆ., ನಗರಸಭಾ ಸದಸ್ಯ ಸತೀಶ್, ಹೈ-ಸ್ಟೆಪ್ರ‍್ಸ್ ಡ್ಯಾನ್ಸ್ ಸ್ಟುಡಿಯೋದ ತೇಜಸ್ ಹಾಗೂ ಇತರರು ಉಪಸ್ಥಿತರಿದ್ದರು.