ಮಡಿಕೇರಿ, ಏ. ೨೭: ಕಾಯಿಮಾನಿ-ಶ್ರೀಮಂಗಲ ಗ್ರಾಮದ ಶ್ರೀ ಭದ್ರಕಾಳಿ ಅಯ್ಯಪ್ಪ ದೇವರ ದೇವಾಲಯದಲ್ಲಿ ಮೇ ೫ ರಂದು ರಾತ್ರಿ ೮.೩೦ ಗಂಟೆಗೆ ಕಾಯಿಮಾನಿ ಶ್ರೀ ಅಯ್ಯಪ್ಪ ದೇವರ ದೇವಾಲಯದಲ್ಲಿ ಅಯ್ಯಪ್ಪ ದೇವರ ಬೊಳ್ಳಾಟ, ತೀರ್ಥಪ್ರಸಾದ ವಿತರಣೆ ನೆರವೇರಲಿದೆ. ಮೇ ೬ ರಂದು ಪೂರ್ವಾಹ್ನ ೧೦.೩೦ ಗಂಟೆಗೆ ಮಹಾಪೂಜೆ ಮತ್ತು ಪ್ರಸಾದ ವಿನಿಯೋಗ. ಅಪರಾಹ್ನ ೩.೩೦ಕ್ಕೆ ಕುದುರೆ, ಮುಡಿಯೊಂದಿಗೆ ಶ್ರೀಮಂಗಲ, ಕುಟ್ಟ ಮುಖ್ಯ ರಸ್ತೆಯಲ್ಲಿ ಮೆರವಣಿಗೆ, ರಾತ್ರಿ ೬.೩೦ಕ್ಕೆ ಮಹಾ ಮಂಗಳಾರತಿ ಪೂಜೆ ನೆರವೇರಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.