ಆರೋಪಿಯ ಬಂಧನ

ಮಡಿಕೇರಿ, ಏ. ೨೭: ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಯನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.

ನಗರದ ಮಾರುಕಟ್ಟೆ ಬಳಿ ಕಾವೇರಿ ರೇಡಿಯೇಟರ್ ಎಂಬ ಅಂಗಡಿ ನಡೆಸುತ್ತಿರುವ ಗಣೇಶ್ ಎಂಬವರ ಮೇಲೆ ತರಕಾರಿ ಅಂಗಡಿ ವ್ಯಾಪಾರಿಯಾಗಿರುವ ಅಬ್ದುಲ್ ರಹೀಂ ಎಂಬಾತ ಕ್ಷÄಲ್ಲಕ ವಿಚಾರಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಗಣೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ. ಗಣೇಶ್ ಅವರ ಪತ್ನಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಲೆಯತ್ನ ಆರೋಪದಡಿ ಅಬ್ದುಲ್ ರಹೀಂನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಪೊಲೀಸ್ ಪಹರೆ

ನಿನ್ನೆ ಸಂಜೆ ಘಟನೆ ನಡೆದ ಬಳಿಕ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕರಣವನ್ನು ಕೋಮುಗಲಭೆ ಎಂಬAತೆ ಸಂದೇಶ ಹರಿಯಬಿಟ್ಟ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ಮಡಿಕೇರಿ ನಗರದಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಪಹರೆ ಏರ್ಪಡಿಸಲಾಗಿತ್ತು.