ಮಡಿಕೇರಿ, ಏ. ೨೮: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಜನಾಂಗದ ನಡುವೆ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ - ೨೦೨೨ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೇಲ್ಚೆಂಬು, ತೆಕ್ಕಡೆ, ಪೊಡನೊಳನ, ಪರ್ಲಕೋಟಿ ತಂಡಗಳು ಪ್ರಿಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿವೆ.
ಸೀಮಿತ ೬ ಓವರ್‌ಗಳ ಪಂದ್ಯದಲ್ಲಿ ಕಾಳಮನೆ ತಂಡ ೩ ವಿಕೆಟ್‌ಗೆ ೮೩ ರನ್ ಗಳಿಸಿದರೆ, ಕುಯ್ಯಮುಡಿ ತಂಡ ೫ ವಿಕೆಟ್ ಕಳೆದುಕೊಂಡು ೭೧ ರನ್‌ಗಳಿಸಿ ೧೨ ರನ್‌ಗಳ ಅಂತರದಿAದ ಸೋಲನುಭವಿಸಿತು. ತೆಕ್ಕಡೆ ತಂಡ ೬ ವಿಕೆಟ್‌ಗೆ ೮೪ ರನ್ ಗಳಿಸಿದರೆ, ಎಡಿಕೇರಿ ತಂಡ ೭ ವಿಕೆಟ್‌ಗೆ ೫೬ ರನ್ ಗಳಿಸಿ ೨೮ ರನ್‌ಗಳ ಅಂತರದಿAದ ಸೋಲನುಭವಿಸಿತು.
ಅಮೆಮನೆ ತಂಡ ೪ ವಿಕೆಟ್‌ಗೆ ೫೫ ರನ್‌ಗಳಿಸಿದರೆ, ಪುದಿಯನೆರವನ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ಉಳುವಾರನ ತಂಡ ೪ ವಿಕೆಟ್‌ಗೆ ೭೩ ರನ್ ಗಳಿಸಿದರೆ, ಗುಡ್ಡಾಂಡ್ರ ತಂಡ ೪ ವಿಕೆಟ್‌ಗೆ ೫೭ ರನ್ ಗಳಿಸಿ, ೧೬ ರನ್‌ಗಳಿಂದ ಸೋಲನುಭವಿಸಿತು.
ಕಾಳಮನೆ ತಂಡ ೩ ವಿಕೆಟ್‌ಗೆ ೪೯ ರನ್ ಗಳಿಸಿದರೆ, ಮಂದ್ರಿರ ತಂಡ ೨ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ನೆಯ್ಯಣಿ ತಂಡ ೨ ವಿಕೆಟ್‌ಗೆ ೯೧ ರನ್ ಕಲೆಹಾಕಿದರೆ, ಪರಿಚನ ತಂಡ ಕೂಡ ೧ ವಿಕೆಟ್‌ಗೆ ೯೧ ರನ್ ಗಳಿಸಿ ಪಂದ್ಯಾಟ ಸಮನಾಗಿಸಿಕೊಂಡಿತು. ನಂತರ ನಡೆದ ಸೂಪರ್ ಓವರ್‌ನಲ್ಲಿ ನೈಯ್ಯಣಿ ತಂಡ ಗೆಲವು ಸಾಧಿಸಿತು.
ಉಳುವಾರನ ತಂಡ ೩ ವಿಕೆಟ್‌ಗೆ ೭೧ ರನ್ ಗಳಿಸಿದರೆ, ಪರ್ಲಕೋಟಿ ತಂಡ ೨ ವಿಕೆಟ್‌ನಷ್ಟದಲ್ಲಿ ಗುರಿ ಸಾಧಿಸಿತು. ತೆಕ್ಕಡೆ ತಂಡ ೪ ವಿಕೆಟ್‌ಗೆ ೮೭ ರನ್ ಗಳಿಸಿದರೆ, ಕೋಳುಮುಡಿಯನ ತಂಡ ೪ ವಿಕೆಟ್‌ಗೆ ೫೮ ರನ್ ಗಳಿಸಿ ೨೯ರನ್‌ಗಳ ಅಂತರದಿAದ ಸೋಲು ಕಂಡಿತು. ಪೊನ್ನಚನ ತಂಡ ೨ ವಿಕೆಟ್‌ಗೆ ೬೭ ರನ್‌ಗಳಿಸಿದರೆ, ಪೊಡನೊಳನ ತಂಡ ೧ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ನೆಯ್ಯಣಿ ತಂಡ ೪ ವಿಕೆಟ್‌ಗೆ ೬೨ ರನ್ ಗಳಿಸಿದರೆ, ಮೇಲ್ಚೆಂಬು ತಂಡ ೩ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.
ಮತ್ತೊಂದು ಪಂದ್ಯದಲ್ಲಿ ಪರ್ಲಕೋಟಿ ತಂಡ ೧ ವಿಕೆಟ್‌ಗೆ ೧೧೪ ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದರೆ, ಉತ್ತರವಾಗಿ ಆಡಿದ ಮಂದ್ರಿರ ತಂಡ ೬ ವಿಕೆಟ್‌ಗೆ ೨೫ ರನ್ ಮಾತ್ರ ಗಳಿಸಿ ೮೯ ರನ್‌ಗಳ ಭಾರೀ ಅಂತರದಿAದ ಸೋಲು ಕಂಡಿತು. ತೆಕ್ಕಡೆ ತಂಡ ೬ ವಿಕೆಟ್‌ಗೆ ೩೭ ರನ್ ಗಳಿಸಿದರೆ, ಪುದಿಯನೆರವನ ತಂಡ ೬ ವಿಕೆಟ್‌ಗೆ ೨೮ರನ್ ಗಳಿಸಿ ೯ ರನ್‌ಗಳ ಅಂತರದಿAದ ಸೋಲು ಕಂಡಿತು.