ನಾಪೋಕ್ಲು, ಏ. ೨೮: ಸಮೀಪದ ನೆಲಜಿ ಗ್ರಾಮದ ಮೇದ ಜನಾಂಗದ ಕುಟುಂಬಗಳ ವತಿಯಿಂದ ಕ್ರಿಕೆಟ್ ಪಂದ್ಯಾಟವನ್ನು ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ೨ ದಿನ ಏರ್ಪಡಿಸಲಾಗಿದೆ.
ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮನುಮುತ್ತಪ್ಪ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಹಿಂದುಳಿದ ಜನಾಂಗದವರು ತಮ್ಮದೇ ಆದ ರೀತಿಯಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುವುದರ ಮೂಲಕ ಜನಾಂಗದ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಯುವಜನಾಂಗ ಉತ್ಸಾಹದಿಂದ ಕ್ರೀಡಾಕೂಟವನ್ನು ನಡೆಸುತ್ತಿದೆ. ಕ್ರೀಡೆ ಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಪಂದ್ಯಾಟಗಳಲ್ಲಿ ಪಾಲ್ಗೊಂಡು ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕು. ಪ್ರತಿವರ್ಷವೂ ಕ್ರೀಡಾಕೂಟ ಮುಂದುವರಿಯಲಿ ಎಂದು ಹಾರೈಸಿದರು. ಮೇದ ಕುಟುಂಬಸ್ಥರ ಪ್ರಮುಖರಾದ ಸೋಮಯ್ಯ ಮಾತನಾಡಿ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ. ಕ್ರೀಡಾಕೂಟಕ್ಕೆ ಸರ್ವರ ಸಹಕಾರ ಅಗತ್ಯ ಎಂದರು. ಟ್ರೋಫಿ ದಾನಿ ಜಾನಕಿ ತೀರ್ಪುಗಾರ ರಾದ ಜಯಂತ್, ಪ್ರಮೋದ್, ಸಂಘಟಕರಾದ ಚೇತನ್, ಸುನಿಲ್ ಪಾಲ್ಗೊಂಡಿದ್ದರು.