*ಸಿದ್ದಾಪುರ, ಏ. ೨೮: ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ. ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಶೇ. ೨೫ ರಷ್ಟು ಅನುದಾನದಲ್ಲಿ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು.

ವಾಲ್ನೂರು ವಾರ್ಡ್ನ ಫಲಾನುಭವಿಗಳಿಗೆ ಡ್ರಮ್ ಹಾಗೂ ಕಸ ನಿರ್ವಹಣೆಯ ಪರಿಕರಗಳನ್ನು ನೀಡಲಾಯಿತು. ಶುಲ್ಕ ಪಾವತಿಸದೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ತ್ಯಾಗತ್ತೂರು ವಾರ್ಡ್ನ ಗಿರಿಜನರ ಮನೆಗಳ ಶುಲ್ಕವನ್ನು ಪಾವತಿಸುವ ಮೂಲಕ ೨೧ ಕುಟುಂಬಗಳಿಗೆ ಮತ್ತೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಮುಂದಿನ ದಿನಗಳಲ್ಲಿ ಅಭ್ಯತ್‌ಮಂಗಲದ ಫಲಾನುಭವಿಗಳಿಗೆ ಡ್ರಮ್‌ಗಳನ್ನು ವಿತರಿಸಲಾಗುವುದು ಎಂದು ಗ್ರಾ.ಪಂ. ಪ್ರತಿನಿಧಿಗಳು ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷೆ ಬಿ.ಎಸ್. ಅನಿತಾ, ಉಪಾಧ್ಯಕ್ಷೆ ಸುಧಾ, ಅಭಿವೃದ್ಧಿ ಅಧಿಕಾರಿ ಲೋಕೇಶ್, ಕಾರ್ಯದರ್ಶಿ ರವಿ ಸದಸ್ಯರುಗಳಾದ ಭುವನೇಂದ್ರ, ಮನು ಮಹೇಶ್ ಮತ್ತಿತರ ಪ್ರತಿನಿಧಿಗಳು ಈ ಸಂದರ್ಭ ಹಾಜರಿದ್ದರು.