ಮಡಿಕೇರಿ, ಏ. ೨೬: ನಗರದ ಪೆನ್ಷನ್ ಲೇನ್ ನ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನ ವಾರ್ಷಿಕೋತ್ಸವ ಮೇ ೨ ಹಾಗೂ ೩ ರಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮೇ ೨ ರಂದು ಸಂಜೆ ೬ ಗಂಟೆಗೆ ಪಯ್ಯನೂರು ಆಚಾರ್ಯ ಈಶ್ವರನ್ ನಂಬೂದರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ಆರಂಭಗೊಳ್ಳಲಿದೆ. ಮೊದಲು ಆಚಾರ್ಯ ವರಣಂ, ಪುಣ್ಯಾಹ ಶುದ್ಧಿ, ಸುದರ್ಶನ ಹೋಮ, ದೇವಿ ಪೂಜೆ, ಲಲಿತ ಸಹಸ್ರನಾಮಾರ್ಚನೆ ನಡೆದು ಮೇ ೩ ರಂದು ಬೆಳಿಗ್ಗೆ ೬ ಗಂಟೆಯಿAದ ಮಹಾಗಣಪತಿ ಹೋಮ, ನವಕ ಪಂಚಗವ್ಯ, ಕಳಸಪೂಜೆ, ನವಕ ಪಂಚಗವ್ಯ ಕಳಶಾಭಿಷೇಕ, ಸರ್ವಾಲಂಕಾರ ಮಹಾಪೂಜೆ, ಪಾಷಣಮೂರ್ತಿ ದೈವದ ಕಳಶ ಪೂಜೆ, ಅಲಂಕಾರ ಪೂಜೆ ನಂತರ ನಾಗ ಪ್ರತಿಷ್ಠಾಪನ ವಾರ್ಷಿಕೋತ್ಸವ ಹಾಗೂ ನಾಗದರ್ಶನ ನಡೆಯಲಿದೆ.
ಬೆಳಿಗ್ಗೆ ೮ ಗಂಟೆಗೆ ಆಶ್ಲೇಷ ಬಲಿ, ಉಡುಪಿ ಪೆರ್ಲಂಪಾಡಿಯ ನಾಗಪಾತ್ರಿಗಳಾದ ರಮಾನಂದಭಟ್ ಅವರಿಂದ ೧೧ ಗಂಟೆಗೆ ನಾಗದರ್ಶನ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ ೭.೩೦ ರಿಂದ ಪಾಷಣಮೂರ್ತಿ ದೈವಕೋಲ ನೆರವೇರಲಿದೆ.
ಮೇ ೪ ರಂದು ಸಂಜೆ ೫ ಗಂಟೆಯಿAದ ಪಾಷಣಮೂರ್ತಿಗೆ ಅಗೆಲು ಸೇವೆ ನಡೆಯಲಿದೆ ಎಂದು ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಟ್ರಸ್ಟ್ ಮಾಹಿತಿ ನೀಡಿದೆ.