ಸೋಮವಾರಪೇಟೆ, ಏ. ೨೬: ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ, ವೀರಶೈವ ಸಮಾಜ ಹಾಗೂ ಅಕ್ಕನ ಬಳಗದ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಇಲ್ಲಿನ ಮಹಿಳಾ ಸಮಾಜದಲ್ಲಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಛದ್ಮವೇಷÀ ಮತ್ತು ವಚನಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಕಾವೇರಿ ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಯುವರಾಜ್ ಮಾತನಾಡಿ, ವಚನಗಳು ನಮ್ಮ ಮನಸ್ಸು ಮತ್ತು ಹೃದಯದಲ್ಲಿ ಬೆಳಕು ಮೂಡಿಸುವ ಜ್ಯೋತಿಗಳಾಗಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ವಚನಗಳು ಜಾತಿ, ಮತ, ಪಂಥ, ವರ್ಗ, ವರ್ಣ, ಲಿಂಗ ಭೇದದ ಪೂರ್ವಾಗ್ರಹಗಳಿಂದ ಮುಕ್ತವಾಗಿದ್ದು, ಇಡೀ ಮಾನವ ಜನಾಂಗದ ಪ್ರಗತಿಗೆ ಪೂರಕವಾಗಿವೆ. ಈ ನಿಟ್ಟಿನಲ್ಲಿ ವಚನ ಗಳ ಸಾರವನ್ನು ಅರಿತು ಅದರಂತೆ ಜೀವನ ನಡೆಸಬೇಕು ಎಂದರು.
ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಮಾತನಾಡಿ, ವಚನಗಳು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು.ಅದು ನಮ್ಮ ಬದುಕಿಗೆ ಮಾನವೀಯ ಮೌಲ್ಯ ಮತ್ತು ಜೀವನ ಕ್ರಮವನ್ನು ಕಲಿಸಿಕೊಡುವುದ ರಿಂದ ಎಲ್ಲರೂ ವಚನ ಸಾಹಿತ್ಯವನ್ನು ಅಭ್ಯಸಿಸಬೇಕು. ೧೨ನೇ ಶತಮಾನ ದಲ್ಲಿಯೇ ಸಮಾನತೆಯ ಸಾರವನ್ನು ವಚನಗಳ ಮೂಲಕ ಇಡೀ ಸಮಾಜಕ್ಕೆ ಪರಿಚಯಿಸಿದ ವಚನಗಳು ಎಂದೆAದಿಗೂ ಪ್ರಸ್ತುತ ಎಂದರು.
ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆಯ ಜಿಲ್ಲಾಧ್ಯಕ್ಷ ಎ.ಎಸ್. ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವೇದಿಕೆಯ ತಾಲೂಕು ಅಧ್ಯಕ್ಷ ಜಯರಾಜ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಉಷಾರಾಣಿ ಗುರುಪ್ರಸಾದ್, ತಾಲೂಕು ವೀರಶೈವ ಸಮಾಜದ ಕಾರ್ಯದರ್ಶಿ ನಾಗರಾಜ್, ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಸೇರಿದಂತೆ ಇತರರು ಉಪಸ್ಥಿತರಿ ದ್ದರು.