ಚೆಯ್ಯಂಡಾಣೆ, ಏ. ೨೬: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಹೊಳೆಯಲ್ಲಿ ನಿರಂತರ ತ್ಯಾಜ್ಯ ತಂದು ಸುರಿಯುತ್ತಿದ್ದು. ಹಲವಾರು ಬಾರಿ ಗ್ರಾಮಪಂಚಾಯಿತಿ ಮುನ್ನೆಚ್ಚರಿಕೆ ನೀಡಿದರೂ ಕಸ ಎಸೆಯುವುದನ್ನು ಜನರು ನಿಲ್ಲಿಸುತ್ತಿಲ್ಲ. ಸಮೀಪದಲ್ಲೇ ಇರುವ ಬಸ್ ತಂಗುದಾಣದಲ್ಲಿ ಮಧ್ಯ ಸೇವಿಸಿ ಅದರ ಬಾಟಲಿಗಳನ್ನು ಸಮೀಪದಲ್ಲೇ ಎಸೆದು ಮಲಿನಗೊಳಿಸುತ್ತಿದ್ದು, ಬಸ್ ತಂಗುದಾಣದಲ್ಲಿ ಕಸ ಹಾಕಿದರೆ ೫೦೦/- ದಂಡ ವಿಧಿಸಲಾಗುದೆಂದು ನಾಮಫಲಕ ಕೂಡ ಹಾಕಿದ್ದಾರೆ. ಆದರೆ ಇದೆಲ್ಲವನ್ನೂ ನಿರ್ಲಕ್ಷಿಸಿ ತ್ಯಾಜ್ಯಗಳನ್ನು ಹೊಳೆ ಬದಿಯಲ್ಲಿ ಸುರಿಯುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಪತ್ರಿಕೆ ಯೊಂದಿಗೆ ಮಾಹಿತಿ ನೀಡಿ, ಹೊಳೆ ಬದಿಯಲ್ಲಿ ತ್ಯಾಜ್ಯ ಸುರಿಯಬಾರದೆಂದು ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲ ಇನ್ನು ಮುಂದೆ ತಾಜ್ಯ ಸುರಿಯುವ ವೇಳೆ ಪತ್ತೆಯಾದಲ್ಲಿ ಅವರ ವಿರುದ್ಧ ಕಠಿಣ ಕ್ರಮಕೈಗೊಂಡು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿ¸ Àಲಾಗುವುದೆಂದು ಎಚ್ಚರಿಕೆ ನೀಡಿದರು.
-ಅಶ್ರಫ್ ಚೆಯ್ಯಂಡಾಣೆ