ನಾಪೋಕ್ಲು, ಏ. ೨೫: ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ದೇವರ ಉತ್ಸವ ವಿಜೃಂಭಣೆಯಿAದ ನೆರವೇರಿತು. ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಉತ್ಸವ ಸ್ಥಗಿತಗೊಂಡಿತ್ತು. ಗ್ರಾಮದ ಭಕ್ತರು ಒಗ್ಗೂಡಿ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದರು. ಉತ್ಸವದ ಅಂಗವಾಗಿ ಮಹಾಪೂಜೆ, ಮೂರು ಕೋಲಗಳು, ದೇವಿಯ ರಾಟೆ ಉತ್ಸವ ಜರುಗಿದವು. ದಾನಿಗಳ ನೆರವಿನಿಂದ ಪುರಾತನ ದೇವಾಲಯವನ್ನು ನವೀಕರಿಸಲಾಗಿದೆ. ಇನ್ನಷ್ಟು ಅಭಿವೃದ್ಧಿಕಾರ್ಯಗಳು ನಡೆಯಬೇಕಿವೆ ಎಂದು ದೇವಾಲಯದ ಆಡಳಿತ ಮಂಡಳಿ ಮುಖ್ಯಸ್ಥರು ತಿಳಿಸಿದರು.

ಉತ್ಸವದ ಅಂಗವಾಗಿ ಭಂಡಾರ ತರುವುದು, ಬೇಡು ಹಬ್ಬ, ರಾಟೆಯಲ್ಲಿ ದೇವರನ್ನು ಆಡಿಸುವುದು ಹಾಗೂ ತೆರೆಗಳು ದೇವಾಲಯಕ್ಕೆ ಬರುವುದು ಸೇರಿದಂತೆ ವಿವಿಧ ಆಚರಣೆಗಳು ನಡೆದವು. ಗ್ರಾಮದ ಅದಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.