ಮಡಿಕೇರಿ, ಏ. ೨೫: ಪುಟಾಣಿನಗರದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ೩೨ನೇ ವರ್ಷದ ವಾರ್ಷಿಕೋತ್ಸವ ತಾ. ೨೮ ಮತ್ತು ೨೯ ರಂದು ನಡೆಯಲಿದೆ.

ತಾ. ೨೮ ರಂದು ಸಂಜೆ ೫.೩೦ರ ನಂತರ ಗುರು ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚ, ಸ್ಥಳ ಶುದ್ಧಿ, ದೀಪ ನಮಸ್ಕಾರ ಮತ್ತು ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ತಾ. ೨೯ ರಂದು ಬೆಳಿಗ್ಗೆ ೬.೩೦ಕ್ಕೆ ಗಣಪತಿ ಹೋಮ, ನವ ಕಲಶ ಪ್ರತಿಷ್ಠಾಪನ ಪೂರ್ವಕ, ಶ್ರೀ ದುರ್ಗಾಪರಮೇಶ್ವರಿ ಶೋಡಕೋಪಚಾರ ಪೂಜೆ, ಕಳಶಾಭಿಷೇಕ, ಕುಂಕುಮಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ, ಪೂರ್ವಾಹ್ನ ೧೦.೩೦ರ ವರೆಗೆ ಹಾಗೂ ಶ್ರೀ ದೇವಿಯ ಮಹಾ ಪ್ರಸಾದ ವಿತರಣೆ, ಮಧ್ಯಾಹ್ನ ೧.೩೦ ರಿಂದ ೩.೩೦ರ ವರೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.