ಮಡಿಕೇರಿ/ಸೋಮವಾರಪೇಟೆ, ಏ.೨೫: ನೆರೆಯ ಹಾಸನಜಿಲ್ಲೆ, ಸಕಲೇಶಪುರ ತಾಲೂಕು ವ್ಯಾಪ್ತಿಯ ಮೂಕನಮನೆ ಜಲಪಾತ ವೀಕ್ಷಣೆಗೆ ತೆರಳಿ ನೀರಿಗಿಳಿದ ಜಿಲ್ಲೆಯ ಈರ್ವರು ಪ್ರವಾಸಿಗರು ದುರ್ಮರಣ ಕ್ಕೀಡಾಗಿರುವ ಘಟನೆ ನಡೆದಿದೆ.
ತಾಲೂಕಿನ ಕೊಡ್ಲಿಪೇಟೆ ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾಕುಂದ ಗ್ರಾಮ ನಿವಾಸಿ, ಮರ ಕೆಲಸ ಮಾಡುತ್ತಿದ್ದ ಕುಮಾರ (೩೯) ಹಾಗೂ ಮೂಲತಃ ಸಕಲೇಶಪುರದ ನಿವಾಸಿ, ಪ್ರಸ್ತುತ ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯ ಕಣಾರಳ್ಳಿಯಲ್ಲಿ ನೆಲೆಸಿದ್ದ, ಟ್ಯಾಕ್ಸಿ ಚಾಲಕ ಕಿಶೋರ್ (೩೪) ಎಂಬವರುಗಳೇ ಅಸುನೀಗಿದವರು.
ತಾ. ೨೫ರ ಬೆಳಿಗ್ಗೆ ಇತರ ಸ್ನೇಹಿತರೊಂದಿಗೆ ಕಿಶೋರ್ ಹಾಗೂ ಕುಮಾರ್ ಅವರುಗಳು ಪ್ರವಾಸಕ್ಕೆ ತೆರಳಿದ್ದು, ಮಧ್ಯಾಹ್ನ ವೇಳೆಗೆ ಹಾಸನ ಜಿಲ್ಲೆ, ಅತ್ತಿಹಳ್ಳಿ ಸಮೀಪದ ಮೂಕನಮನೆ ಜಲಪಾತಕ್ಕೆ ತೆರಳಿದ್ದಾರೆ.
ಜಲಪಾತದ ಮೇಲ್ಭಾಗದಲ್ಲಿ ನೀರಿಗಿಳಿದ ಸ್ನೇಹಿತರು ಜಲಕ್ರೀಡೆಯಲ್ಲಿ ತೊಡಗಿದ್ದಾರೆ.