ಸೋಮವಾರಪೇಟೆ, ಏ.೨೬: ಇಲ್ಲಿನ ತಥಾಸ್ತು ಸಾತ್ವಿಕ ಸಂಸ್ಥೆ ವತಿಯಿಂದ ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕದ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.

ಶಿಬಿರವನ್ನು ಮಡಿಕೇರಿಯ ರಕ್ತನಿಧಿ ಕೇಂದ್ರದ ಡಾ. ಕರುಂಬಯ್ಯ ಉದ್ಘಾಟಿಸಿದರು. ನಂತರ ಮಾತ ನಾಡಿ, ಹಲವು ಸಂಘ ಸಂಸ್ಥೆಗಳ ಸಹಕಾರದಿಂದ ಶಿಬಿರಗಳನ್ನು ನಡೆಸಿ ಜಿಲ್ಲೆಗೆ ಬೇಕಾದಂತಹ ರಕ್ತವನ್ನು ಸಂಗ್ರಹಿಸಲಾಗುತ್ತಿತ್ತು. ಆದರೆ, ಕೋವಿಡ್ ೧೯ರ ನಂತರ ರಕ್ತದ ಕೊರತೆ ಕಾಡುತ್ತಿದೆ. ಅಲ್ಲದೆ, ಜಿಲ್ಲಾ ಕೇಂದ್ರದಲ್ಲಿ ಒಂದೇ ರಕ್ತನಿಧಿ ಕೇಂದ್ರ ಇರುವುದರಿಂದ ಸಾಕಷ್ಟು ಸಂಗ್ರಹಿ ಸಲು ಸಮಸ್ಯೆಯಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ರಕ್ತದಾನಿ ಗಳ ಕೊರತೆಯೂ ಕಾಡುತ್ತಿದೆ. ಯುವ ಜನರು ಯಾವುದೇ ಅಂಜಿಕೆ ಇಲ್ಲದೆ, ಮೂರು ತಿಂಗಳಿಗೊಮ್ಮೆ ರಕ್ತದಾನಕ್ಕೆ ಮುಂದಾಗಬೇಕು. ಸಂಘ ಸಂಸ್ಥೆಗಳು ಯುವಕರಲ್ಲಿ ರಕ್ತದಾನದ ಬಗ್ಗೆ ಇರುವ ಹಿಂಜರಿಕೆಯನ್ನು ತೊಡೆದು ಹಾಕುವ ಕೆಲಸ ಮಾಡಬೇಕು ಎಂದರು.

ಸAಸ್ಥೆಯ ಅಧ್ಯಕ್ಷ ಎಚ್.ವಿ. ಉದಯಕುಮಾರ್ ಮಾತನಾಡಿ, ತಥಾಸ್ತು ಸಾತ್ವಿಕ ಸಂಸ್ಥೆ ೧೦ನೇ ಶಿಬಿರ ನಡೆಸುತ್ತಿದೆ. ರಕ್ತದಾನಕ್ಕೆ ಹೆಚ್ಚಿನವರು ಮುಂದಾಗುತ್ತಿಲ್ಲ. ಆದುದರಿಂದ ಈ ಹಿಂದೆ ನೀಡುತ್ತಿದ್ದವರೇ ಮತ್ತೆ ದಾನ ಮಾಡಬೇಕಿದೆ. ಅಲ್ಲದೆ, ಜಿಲ್ಲೆಯ ಬೇರೆಡೆಗಳಲ್ಲೂ ರಕ್ತನಿಧಿ ಕೇಂದ್ರವನ್ನು ತೆರೆದು ರಕ್ತ ಸಂಗ್ರಹಿಸಲು ಇಲಾಖೆ ಮುಂದಾಗಬೇಕೆAದರು. ವೇದಿಕೆಯಲ್ಲಿ ಸಂಸ್ಥೆಯ ಕಾನೂನು ಸಲಹೆಗಾರ ರಾದ ರೂಪ ಕಾಳಪ್ಪ ಇದ್ದರು.