ಕೂಡಿಗೆ, ಏ ೨೬: ಹಳೆ ಕೂಡಿಗೆ ಗ್ರಾಮದ ಶೈನಿಂಗ್ ಸ್ಟಾರ್ ಯುವಕ ಸಂಘದ ವತಿಯಿಂದ ಪ್ರಥಮ ವರ್ಷದ ಜೈ ಭೀಮ್ ಕಪ್ ವಾಲಿಬಾಲ್ ಪಂದ್ಯಾವಳಿ ಮೇ ೭ ಮತ್ತು ೮ ರಂದು ಹಳೆ ಕೂಡಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸಚಿನ್ ತಿಳಿಸಿದ್ದಾರೆ.
ಲೀಗ್ ಮಾದರಿಯಲ್ಲಿ ಪಂದ್ಯಾಟವು ನಡೆಯಲಿದ್ದು, ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ಆಟಗಾರರಿಗೆ ಮಾತ್ರ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ೭೪೧೧೯೭೪೨೪೫, ೯೭೪೧೯೦೨೫೩೮ ಸಂಪರ್ಕಿಸುವAತೆ ಕೋರಿದ್ದಾರೆ.