ಮಡಿಕೇರಿ, ಏ. ೨೬: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಉತ್ಸವ ಪ್ರಾರಂಭಗೊAಡ ಸಂದರ್ಭದಿAದ ರಚನೆಯಾಗಿ ಈ ಹಾಕಿ ಉತ್ಸವದ ಜವಾಬ್ದಾರಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕೊಡವ ಹಾಕಿ ಅಕಾಡೆಮಿ ಇದೀಗ ಪುನರ್ರಚನೆಯಾಗಿದೆ.
ಹಾಕಿ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ ಹಾಕಿ ಉತ್ಸವದ ಜನಕ ಪಾಂಡAಡ ಎಂ. ಕುಟ್ಟಪ್ಪ ಅವರೇ ಅಕಾಡೆಮಿಯ ಅಧ್ಯಕ್ಷರಾಗಿ ಮುಂದುವರಿದಿದ್ದರು. ಕಳೆದೆರಡು ವರ್ಷಗಳ ಹಿಂದೆ ಕುಟ್ಟಪ್ಪ ಅವರು ದಿವಂಗತರಾಗಿದ್ದಾರೆ. ಇದೀಗ ಹಾಕಿ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಕುಟ್ಟಪ್ಪ ಅವರ ಪುತ್ರ ಪಾಂಡAಡ ಸುಧೀರ್ ಬೋಪಣ್ಣ ಹಾಗೂ ಕಾರ್ಯಾಧ್ಯಕ್ಷರಾಗಿ ಮೇಕೇರಿರ ಪೆಮ್ಮಯ್ಯ (ರವಿ) ಹಾಗೂ ಕಾರ್ಯದರ್ಶಿಯಾಗಿ ಮಾಳೇಟಿರ ಎ. ಶ್ರೀನಿವಾಸ್ ಅವರನ್ನು ನೇಮಕ ಮಾಡಲಾಗಿದೆ.
(ಮೊದಲ ಪುಟದಿಂದ) ಉಪಾಧ್ಯಕ್ಷರುಗಳಾಗಿ ಮಡಿಕೇರಿ ತಾಲೂಕಿನಿಂದ ಬಡಕಡ ದೀನಾ ಪೂವಯ್ಯ, ವೀರಾಜಪೇಟೆ ತಾಲೂಕಿನಿಂದ ಮಾದಂಡ ಜಯ ಪೂವಯ್ಯ, ಸೋಮವಾರಪೇಟೆ ಯಿಂದ ಕುಕ್ಕೆರ ಜಯ ಚಿಣ್ಣಪ್ಪ ನೇಮಕ ಗೊಂಡಿದ್ದಾರೆ. ಜಂಟಿ ಕಾರ್ಯದರ್ಶಿ ಯಾಗಿ ಮುಕ್ಕಾಟಿರ ರನ್ನ ಭೀಮಯ್ಯ, ನಿರ್ದೇಶಕರುಗಳಾಗಿ ಮಾರ್ಚಂಡ ಗಣೇಶ್ ಪೊನ್ನಪ್ಪ, ನೆರ್ಪಂಡ ಹರ್ಷ, ಕುಯಿಮಂಡ ಕಿರಣ್ಕುಮಾರ್, ಕಲಿಯಂಡ ಸಂಪನ್ ಅಯ್ಯಪ್ಪ, ಚೇನಂಡ ಸುರೇಶ್ ನಾಣಯ್ಯ, ಚೆಯ್ಯಂಡ ಸತ್ಯ ಗಣಪತಿ, ಕುಲ್ಲೇಟಿರ ಅರುಣ್ ಬೇಬ, ಕಂಬೀರAಡ ರಾಕಿ ಅವರುಗಳನ್ನು ಆಯ್ಕೆ ಮಾಡಲಾಗಿದೆ.
ವೀರಾಜಪೇಟೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಅಕಾಡೆಮಿಯ ವಾರ್ಷಿಕ ಮಹಾಸಭೆ ಮೇ ೭ ರಂದು ಬಾಳುಗೋಡುವಿನಲ್ಲಿ ನಡೆಯಲಿದ್ದು, ಅಂದು ಇದು ಅಧಿಕೃತವಾಗಲಿದೆ. ಸಭೆಯಲ್ಲಿ ಹಾಲಿ ಕಾರ್ಯದರ್ಶಿ ಅಮ್ಮುಣಿಚಂಡ ರವಿ ಉತ್ತಪ್ಪ, ಮುಕ್ಕಾಟಿರ ಕ್ಯಾಟಿ ಮತ್ತಿತರರು ಪಾಲ್ಗೊಂಡಿದ್ದರು.