ಕೊರೊನಾ ಹೆಚ್ಚಾದರೆ ವಿಮಾನ ನಿಲ್ದಾಣ, ಗಡಿ ಜಿಲ್ಲೆಗಳಲ್ಲಿ ಮತ್ತೆ ಕಣ್ಗಾವಲು
ವಿಜಯಪುರ, ಏ. ೨೬: ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮತ್ತೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾಂಕ್ರಾಮಿಕ ರೋಗದ ನಾಲ್ಕನೇ ಅಲೆಯ ಭೀತಿ ಆವರಿಸಿದೆ. ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರದ ಸಲಹೆಯನ್ನು ಆಧರಿಸಿ ರಾಜ್ಯದ ವಿಮಾನ ನಿಲ್ದಾಣಗಳು ಮತ್ತು ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಮತ್ತು ಕಣ್ಗಾವಲು ಕ್ರಮಗಳನ್ನು ಮತ್ತೆ ಜಾರಿಗೊಳಿಸಬಹುದು ಎಂದು ಹೇಳಿದ್ದಾರೆ. ಇದೇ ವೇಳೆ ಕೊರೊನಾ ಹರಡುವುದನ್ನು ತಡೆಯಲು ಜನ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಿಎಂ ಮನವಿ ಮಾಡಿದರು. ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗದ ಕಾರಣ ಆತಂಕ ಪಡುವ ಅಗತ್ಯವಿಲ್ಲ, ಆದರೂ ನಾವು ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊAದಿಗೆ ಪ್ರಧಾನಿ ಮೋದಿ ಅವರ ಸಭೆಯ ನಂತರ ಕೇಂದ್ರದ ಸಲಹೆಯನ್ನು ಆಧರಿಸಿ, ರಾಜ್ಯದ ವಿಮಾನ ನಿಲ್ದಾಣಗಳು ಮತ್ತು ಗಡಿ ಜಿಲ್ಲೆಗಳಲ್ಲಿ ವಿಶೇಷವಾಗಿ ಮಹಾರಾಷ್ಟç ಮತ್ತು ಕೇರಳ ಗಡಿಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಮತ್ತು ಕಣ್ಗಾವಲು ಕ್ರಮಗಳನ್ನು ಮತ್ತೆ ಜಾರಿಗೊಳಿಸುತ್ತೇವೆ ಎಂದು ಹೇಳಿದರು.
ಟ್ಟಿಟ್ಟರ್ನ್ನು ಖರೀದಿಸಿದ ಎಲಾನ್ ಮಸ್ಕ್
ಅಮೇರಿಕ, ಏ. ೨೬; ಉದ್ಯಮ ಜಗತ್ತಿನ ಪ್ರಮುಖ ಬೆಳವಣಿಗೆಯೊಂದರಲ್ಲಿ ವಿಶ್ವದ ನಂಬರ್ ೧ ಶ್ರೀಮಂತ, ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮೈಕ್ರೋಬ್ಲಾಗಿಂಗ್ ತಾಣ ಟ್ಟಿಟ್ಟರ್ನ್ನು ಖರೀದಿಸಿದ್ದಾರೆ. ೪೪ ಬಿಲಿಯನ್ ಡಾಲರ್ (೩.೩೭ ಲಕ್ಷ ಕೋಟಿ ರೂ. - ಕರ್ನಾಟಕ ಬಜೆಟ್ಗಿಂತ ಹೆಚ್ಚು)ಗೆ ಟಿಟ್ಟರ್ ಅನ್ನು ಖರೀದಿ ಮಾಡಿದ್ದು, ಈವರೆಗೆ ಉದ್ಯಮ ಜಗತ್ತಿನಲ್ಲಿ ನಡೆದ ಬೃಹತ್ ಡೀಲ್ ಇದಾಗಲಿದೆ. ೧೬ ವರ್ಷ ಹಿಂದೆ ಆರಂಭವಾಗಿ ಸದ್ಯ ಸಾರ್ವಜನಿಕ ಕಂಪನಿಯಾಗಿರುವ ಈ ಸಾಮಾಜಿಕ ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್ ಅನ್ನು ಖಾಸಗಿಯಾಗಿ ತೆಗೆದುಕೊಂಡು ಹೋಗಲಿದ್ದೇನೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಈ ಖರೀದಿ ಹಿನ್ನೆಲೆಯಲ್ಲಿ ಹೂಡಿಕೆದಾರರು ತಾವು ಹೊಂದಿರುವ ಪ್ರತಿ ಟ್ವಿಟ್ಟರ್ ಷೇರಿಗೆ ೫೪.೨ ಡಾಲರ್ ಪಡೆಯಲಿದ್ದಾರೆ ಎಂದು ಕಂಪನಿಯು ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ಇದು ಏ. ೧ರ ಷೇರು ಪೇಟೆ ಮುಕ್ತಾಯದ ವೇಳೆ ಟ್ಟಿಟ್ಟರ್ ಷೇರು ಹೊಂದಿದ್ದ ಬೆಲೆಗಿಂತ ಶೇ. ೩೮ರಷ್ಟು ಹೆÀಚ್ಚಿನದಾಗಿದೆ. ಆದರೆ ಮಸ್ಕ್ ಟ್ವಿಟ್ಟರ್ನಲ್ಲಿ ದೊಡ್ಡ ಪಾಲು ಷೇರನ್ನು ಖರೀದಿಸಿರುವುದಾಗಿ ಘೋಷಿಸಿದ ಬಳಿಕ ಷೇರುಗಳು ಭಾರೀ ಏರಿಕೆ ಕಂಡಿದೆ.
ಕಾAಗ್ರೆಸ್ ಸೇರ್ಪಡೆಗೆ ಪ್ರಶಾಂತ್ ಕಿಶೋರ್ ನಿರಾಕರಣೆ
ನವದೆಹಲಿ, ಏ. ೨೬: ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆಯೇರುವ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸೇರ್ಪಡೆಯಾಗಲಿದ್ದಾರೆ ಎಂಬAತಹ ಮಾತುಗಳು ಬಹಳ ದಿನಗಳಿಂದ ಕೇಳಿಬರುತಿತ್ತು. ಈ ಸಂಬAಧ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ ಪಕ್ಷದ ಮುಖಂಡರೊAದಿಗೆ ಹಲವು ಸುತ್ತಿನ ಮಾತುಕತೆ ಸಹ ನಡೆಸಿದ್ದರು. ಆದರೆ, ಕೊನೆಗೆ ಏನಾಯಿತೊ, ಈಗ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿಲ್ಲ ಎಂಬAತಹ ಸುದ್ದಿ ಇಂದು ಹೊರಬಿದ್ದಿದೆ. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಅವಕಾಶವನ್ನು ನಿರಾಕರಿಸಿದ್ದಾರೆ ಎಂದು ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ತಿಳಿಸಿದ್ದಾರೆ. ಐ-ಪ್ಯಾಕ್ ಭಾಗವಾಗಿ ಕಾಂಗ್ರೆಸ್ ಸೇರ್ಪಡೆಯಾಗಲು ಪ್ರಶಾಂತ್ ಕಿಶೋರ್ ಅವಕಾಶ ನಿರಾಕರಿಸುವುದಾಗಿ ಅವರು ತಿಳಿಸಿದ್ದಾರೆ.
ನಿಗದಿಯಂತೆ ಶಾಲೆ ಆರಂಭ - ಶಿಕ್ಷಣ ಸಚಿವ
ಬೆಂಗಳೂರು, ಏ. ೨೬: ಕೊರೊನಾ ನಾಲ್ಕನೆ ಅಲೆ ಭೀತಿಯ ನಡುವೆಯೇ ನಿಗದಿಯಂತೆ ಮೇ ೧೬ ರಿಂದ ಶಾಲೆಗಳು ಆರಂಭವಾಗಲಿವೆ, ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿAದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್- ಜುಲೈನಲ್ಲಿ ನಾಲ್ಕನೇ ಅಲೆ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಮೇ ೧೬ ರಿಂದ ಶಾಲೆಗಳನ್ನು ಆರಂಭಿಸುವ ತೀರ್ಮಾನವನ್ನು ಈಗಾಗಲೇ ಮಾಡಿದ್ದೇವೆ. ಅದರಂತೆ ರಾಜ್ಯಾದ್ಯಂತ ೧ ರಿಂದ ೧೦ನೇ ತರಗತಿಗಳು ಮೇ ೧೬ ರಿಂದ ಪ್ರಾರಂಭವಾಗಲಿವೆ ಎಂದರು.
ಕೇರಳ ಮೂಲದ ೧೦ ದರೋಡೆಕೋರರ ಬಂಧನ
ಬೆAಗಳೂರು, ಏ. ೨೬: ಬೆಂಗಳೂರಿನ ಮಾದಾವರದ ನಾಡಗೀರ್ ಕಾಲೇಜ್ ಬಳಿ ೧೦ ಮಂದಿ ಕೇರಳ ಮೂಲದ ದರೋಡೆಕೋರರನ್ನು ಬಂಧಿಸಿದ್ದಾರೆ. ಕೇರಳ ಮೂಲದ ಆಭರಣ ವ್ಯಾಪಾರಿ ೬೦ ವರ್ಷದ ಅಕೌಂಟೆAಟ್ ನೀಡಿದ ದೂರಿನ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ತುಮಕೂರು ಹೆದ್ದಾರಿಯಲ್ಲಿ ೧೦ ಮಂದಿ ಕೇರಳ ಮೂಲದ ದರೋಡೆಕೋರರ ತಂಡವನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ ಕೇರಳದಿಂದ ಎಸ್ಯುವಿ ಬಾಡಿಗೆಗೆ ಪಡೆದು ವಾಹನಗಳ ನಂಬರ್ ಪ್ಲೇಟ್ ಬದಲಾಯಿಸುವ ಮೂಲಕ ರಾಜ್ಯಾದ್ಯಂತ ಡಕಾಯಿತಿಗಳನ್ನು ನಡೆಸುತ್ತದೆ. ಸಂತ್ರಸ್ತರಿAದ ೧ ಕೋಟಿ ರೂಪಾಯಿ ನಗದು ಹಾಗೂ ಇತರೆ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದರು.
ಮಾಜಿ ಎಂಎಲ್ಸಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ
ಬೆಂಗಳೂರು, ಏ. ೨೬: ಕಾಂಗ್ರೆಸ್ನ ಮಾಜಿ ಎಂಎಲ್ಸಿ ಶ್ರೀಕಾಂತ್ ಎಲ್ ಘೋಟ್ನೇಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿದ್ದಾರೆ. ಲೋಕಾಯುಕ್ತರು ಮಾಡಿರುವ ಶಿಫಾರಸ್ಸುಗಳನ್ನು ಅಂಗೀಕರಿಸಿರುವ ರಾಜ್ಯಪಾಲರು, ಶ್ರೀಕಾಂತ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಮತ್ತು ಸರ್ಕಾರದ ಅನುದಾನವನ್ನು ವಸೂಲಿ ಮಾಡಲು ಲೋಕಾಯುಕ್ತ ವರದಿಯನ್ನು ಸಕ್ಷಮ ಅಧಿಕಾರಿಗಳಿಗೆ ಕಳುಹಿಸಲು ಆದೇಶ ಹೊರಡಿಸಿದ್ದಾರೆಂದು ತಿಳಿದುಬಂದಿದೆ. ಲೋಕಾಯುಕ್ತರ ಸಂಶೋಧನೆಗಳು ಸೇರಿದಂತೆ ಪ್ರಕರಣದ ಸತ್ಯ ಮತ್ತು ಸಂದರ್ಭಗಳನ್ನು ಪರಿಗಣಿಸಿ, ಶ್ರೀಕಾಂತ್ ಎಲ್ ಘೋಟ್ನೇಕರ್ ಮತ್ತು ಇತರರು ಸಮುದಾಯ ಭವನ ನಿರ್ಮಾಣದ ಉದ್ದೇಶಕ್ಕಾಗಿ ರಾಜ್ಯ ಸರ್ಕಾರದಿಂದ ಅನುದಾನವನ್ನು ಪಡೆದುಕೊಂಡಿದ್ದು, ಈ ಅನುದಾನವನ್ನು ಉದ್ದೇಶಿತ ಯೋಜನೆಗಲ್ಲದೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಹಣವನ್ನು ಬಳಸಿಕೊಂಡಿದ್ದು, ಈ ಮೂಲಕ ಅನುದಾನದ ಹಣವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಮಾಜಿ ಎಂಎಲ್ಸಿ ಶ್ರೀಕಾಂತ್ ಎಲ್ ಘೋಟ್ನೇಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಪಾಯದಿಂದ ಪಾರಾದ ಸಿಎಂ
ವಿಜಯಪುರ, ಏ. ೨೬: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಸಂಭಾವ್ಯ ಅಪಾಯವೊಂದರಿAದ ಪಾರಾಗಿದ್ದಾರೆ. ಇಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ, ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆ ಮತ್ತು ಪೈಪ್ ವಿತರಣಾ ಕಾಮಗಾರಿಗೆ ಚಾಲನೆ ನೀಡುವುದಕ್ಕೂ ಮುನ್ನ ಗೋವುಗಳಿಗೆ ಪೂಜೆ ಸಲ್ಲಿಸಿದರು. ಈ ಸಂಭ್ರಮದ ಕಾರ್ಯಕ್ರಮದಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿದ್ದಕ್ಕೆ ಶಾಸಕ ಸೋಮನಗೌಡ ಅವರಿಗೆ ಬಂಟನೂರು ಗ್ರಾಮದ ರೈತರು ಎತ್ತುಗಳನ್ನು ದೇಣಿಗೆ ನೀಡಿದ್ದರು. ಮುಖ್ಯಮಂತ್ರಿ ಬೊಮ್ಮಾಯಿ ಅವರು ಒಂದು ಎತ್ತಿನ ಮೈದಡುವಿ ಖುಷಿಪಟ್ಟರು. ಆದರೆ, ಮತ್ತೊಂದು ಎತ್ತು ಗಲಿಬಿಲಿಗೊಂಡು ಮುಖ್ಯಮಂತ್ರಿ ಬೊಮ್ಮಾಯಿ ಇದ್ದೆಡೆ ನುಗ್ಗಲು ಆರಂಭಿಸಿತು. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು, ಪೊಲೀಸರು ಎತ್ತನ್ನು ಬಿಗಿ ಹಿಡಿದರು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಟ್ಟುಸಿರು ಬಿಟ್ಟರು. ಪರಿಣಾಮ ಸ್ವಲ್ಪದರಲ್ಲೇ ಅಪಾಯ ತಪ್ಪಿತು.