ಮಡಿಕೇರಿ, ಏ. ೨೬: ಪ್ರಸಕ್ತ (೨೦೨೨-೨೩) ಸಾಲಿನಲ್ಲಿ ಎನ್‌ಎಲ್‌ಎಂ ಯೋಜನೆಯಡಿ ಜಿಲ್ಲೆಯ ರೈತರಿಗೆ ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ ಬಗ್ಗೆ ಕೂಡಿಗೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲಿ ರೈತರುಗಳಿಗೆ ೨ ದಿನ ಉಚಿತ ತರಬೇತಿ ಕಾರ್ಯಕ್ರಮ ನಡೆಯಲಿದೆ.

ತಾ. ೨೭ ರಂದು (ಇಂದು) ಮತ್ತು ೨೮ ರಂದು ಸೋಮವಾರಪೇಟೆ ತಾಲೂಕು, ತಾ. ೨೯ ಮತ್ತು ೩೦ ರಂದು ಕುಶಾಲನಗರ ತಾಲೂಕು, ಮೇ ೫ ಮತ್ತು ೦೬ ರಂದು ವೀರಾಜಪೇಟೆ ತಾಲೂಕು, ಮೇ ೧೦ ಮತ್ತು ೧೧ ರಂದು ಪೊನ್ನಂಪೇಟೆ ತಾಲೂಕು, ಮೇ ೧೨ ಮತ್ತು ೧೩ ರಂದು ಮಡಿಕೇರಿ ತಾಲೂಕು ಮೇ ೧೭ ಮತ್ತು ೧೮ ರಂದು ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರ ತಾಲೂಕು, ಮೇ ೧೯ ಮತ್ತು ೨೦ ರಂದು ವೀರಾಜಪೇಟೆ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕು, ಮೇ ೨೪ ಮತ್ತು ೨೫ ರಂದು ಮಡಿಕೇರಿ ತಾಲೂಕು, ಕುಶಾಲನಗರ ಮತ್ತು ಪೊನ್ನಂಪೇಟೆ ತಾಲೂಕಿನ ಕೂಡಿಗೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ಉಚಿತ ತರಬೇತಿ ಕಾರ್ಯಕ್ರಮ ನಡೆಯಲಿದೆ.

ಜಿಲ್ಲೆಯ ಆಸಕ್ತ ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಪಶುವೈದ್ಯ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.