ಮಡಿಕೇರಿ, ಏ. ೨೫: ಹಿಂದೂ ಕ್ರಿಕೆಟ್ ಕ್ಲಬ್ ವತಿಯಿಂದ ಮ್ಯಾನ್ಸ್ ಕಾಂಪೌAಡ್ ಮೈದಾನದಲ್ಲಿ ನಡೆದ ಹಿಂದೂ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಶಾಂತಿನಿಕೇತನ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಡಿ.ಸಿ. ಮಕ್ಕಂದೂರು ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು.
ಕಡಗದಾಳು ಸತೀಶ್ ಫ್ರೆಂಡ್ಸ್ ತಂಡ ತೃತೀಯ ಹಾಗೂ ಟೀಮ್ ಆಂಜನೇಯ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು. ಪ್ರಥಮ ಬಹುಮಾನವಾಗಿ ೪೪,೪೪೪ ನಗದು, ದ್ವಿತೀಯ ಬಹುಮಾನವಾಗಿ ೨೨,೨೨೨ ನಗದು, ತೃತೀಯ ಬಹುಮಾನವಾಗಿ ೧೧,೧೧೧ ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಡಿಸಿ ಮಕ್ಕಂದೂರು ತಂಡದ ದಿಲೀಪ್, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಶಾಂತಿನಿಕೇತನ ತಂಡದ ಹರೀಶ್ ಮಸ್ಕಲ್ ಪಡೆದುಕೊಂಡರು.ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ದ್ರೋಣ ತಂಡದ ರಕ್ಷಿತ್, ಸರಣಿ ಪುರುಷೋತ್ತಮ ನಗದು, ನಾಲ್ಕನೇ ಬಹುಮಾನವಾಗಿ ೫,೫೫೫ ನಗದು ಹಾಗೂ ಟ್ರೋಫಿ ನೀಡಲಾಯಿತು.
ಪ್ರಶಸ್ತಿಯನ್ನು ಶಾಂತಿನಿಕೇತನ ತಂಡದ ಶಿವು ಪಡೆದುಕೊಂಡರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉದ್ಯಮಿ ರಮೇಶ್, ನಗರಸಭೆ ಸದಸ್ಯ ಅರುಣ್ ಶೆಟ್ಟಿ, ಪ್ರಾಯೋಜಖರಾದ ದೀಕ್ಷಿತ್ ನಂಗಾರು, ಕ್ಲಬ್ ಅಧ್ಯಕ್ಷ ಪವನ್ ಕೆ.ಆರ್., ವಿನಯ್ ಹಾಗೂ ಕ್ಲಬ್‌ನ ಸದಸ್ಯರು ಹಾಜರಿದ್ದರು.