ರಾಜ್ಯದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಕಡ್ಡಾಯ
ಬೆಂಗಳೂರು, ಏ. ೨೫: ಕೋವಿಡ್ ೪ನೇ ಅಲೆಯನ್ನು ತಡೆಯುವ ಮುನ್ನಚ್ಚೆರಿಕಾ ಕ್ರಮವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ, ಜನಜಂಗುಳಿ ಹೆಚ್ಚಿರುವ ಕಡೆಗಳಲ್ಲಿ ಹಾಗೂ ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿಯವರ ಗೃಹ ಕಛೇರಿ ಕೃಷ್ಣಾದಲ್ಲಿ ಕೋವಿಡ್ ಸಾಂಕ್ರಾಮಿಕಕ್ಕೆ ಸಂಬAಧಿಸಿದAತೆ, ಕಂದಾಯ ಸಚಿವ ಆರ್. ಅಶೋಕ್, ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಸಚಿವರು, ಸಾರ್ವಜನಿಕರು ಹೆಚ್ಚು ಮುಂಜಾಗ್ರತೆ ವಹಿಸಬೇಕಿದೆ. ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ ಎಂದರು. ಹೊಸ ಮಾರ್ಗಸೂಚಿಯಂತೆ ಜನ ಸಂದಣಿ ಹಾಗೂ ಒಳಾಂಗಣದಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆಗೆ ನಿರ್ದೇಶನ ನೀಡಲಾಗಿದೆ. ಸದ್ಯಕ್ಕೆ ಮಾಸ್ಕ್ ಧರಿಸದೇ ಇದ್ದರೆ ದಂಡ ಹಾಕಲಾಗುವುದಿಲ್ಲ. ಆದರೆ ಜನರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ವಿಶ್ವ ಆರೊಗ್ಯ ಸಂಸ್ಥೆ ಲಸಿಕೆ ತೆಗೆದುಕೊಳ್ಳದೇ ಇರುವುದು ಸೋಂಕು ಉಲ್ಬಣಕ್ಕೆ ಕಾರಣವಾಗಿದೆ ಎಂದು ಹೇಳಿದೆ. ಹೀಗಾಗಿ ಎಲ್ಲರೂ ಲಸಿಕೆ ಪಡೆಯಬೇಕು. ೩ನೇ ಡೋಸ್ ಲಸಿಕೆ ಪಡೆಯಲು ಅರ್ಹರಾದವರು ಅದನ್ನು ಪಡೆದುಕೊಳ್ಳಬೇಕು. ಹೆಚ್ಚಿನ ರಕ್ಷಣೆ ಪಡೆದುಕೊಳ್ಳಬೇಕು. ಮಾಧ್ಯಮಗಳು ಕೂಡ ಲಸಿPಕಾರಣ, ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಬಿಡುಗಡೆಯಾದ ಕೆಲವೇ ಕ್ಷಣದಲ್ಲಿ ಮತ್ತೇ ಜಿಗ್ನೇಶ್ ಬಂಧನ
ಗುವಾಹಟಿ, ಏ. ೨೫: ಜಾಮೀನು ಪಡೆದು ಜೈಲಿಂದ ಹೊರಬಂದ ಕೆಲವೇ ಕ್ಷಣದಲ್ಲಿ ಗುಜರಾತ್ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಮತ್ತೊಂದು ಪ್ರಕರಣದಲ್ಲಿ ಸೋಮವಾರ ಮತ್ತೆ ಬಂಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್ ಮಾಡಿ ಬಂಧನಕ್ಕೊಳಗಾಗಿದ್ದ ಮೇವಾನಿ ಅವರು ಅಸ್ಸಾಂನ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ಆದರೆ ಇದರ ಬೆನ್ನಲ್ಲೇ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಹೊಸ ಪ್ರಕರಣದಲ್ಲಿ ಇಂದು ಮತ್ತೆ ಬಂಧಿಸಲಾಗಿದೆ. ಟ್ವೀಟ್ ಪ್ರಕರಣದಲ್ಲಿ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಲಯ ನಿನ್ನೆ ಕಾಯ್ದಿರಿಸಿತ್ತು. ಮೇವಾನಿ ಅವರನ್ನು ಬಂಧಿಸಲು ಬಂದಿದ್ದ ಅಸ್ಸಾಂನ ಬರ್ಪೇಟಾ ಪೊಲೀಸರು ಗುಜರಾತ್ ಶಾಸಕನನ್ನು ಯಾವ ಪ್ರಕರಣದಲ್ಲಿ ಮತ್ತೆ ಬಂಧಿಸಲಾಗಿದೆ ಎಂದು ತಿಳಿಸಿಲ್ಲ. ಅಸ್ಸಾಂನ ಕೊಕ್ರಜಾರ್ನ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಅವರ ವಿರುದ್ಧ ದೂರು ದಾಖಲಿಸಿದ ನಂತರ ಅಸ್ಸಾಂ ಪೊಲೀಸರ ತಂಡವು ಗುರುವಾರ ಗುಜರಾತ್ನ ಪಾಲನ್ಪುರದಿಂದ ಜಿಗ್ನೇಶ್ ಮೇವಾನಿ ಅವರನ್ನು ಮೊದಲ ಬಾರಿಗೆ ಬಂಧಿಸಿತ್ತು.
೨೮೦ ಕೋಟಿ ಮೌಲ್ಯದ ಹೆರಾಯಿನ್ ವಶ
ನವದೆಹಲಿ, ಏ. ೨೫: ಗುಜರಾತ್ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಭಾರತೀಯ ಕರಾವಳಿ ಕಾವಲು ಪಡೆ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ಸೋಮವಾರ ರಾಜ್ಯದ ಕರಾವಳಿ ಸಮೀಪ ಅರಬ್ಬಿ ಸಮುದ್ರದಲ್ಲಿ ಒಂಬತ್ತು ಸಿಬ್ಬಂದಿಯೊAದಿಗೆ ಪಾಕಿಸ್ತಾನದ ದೋಣಿಯಲ್ಲಿದ್ದ ೨೮೦ ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದೆ. ಪಾಕಿಸ್ತಾನದ ಬೋಟ್ ‘ಅಲ್ ಹಜ್’ ಭಾರತದ ಸಮುದ್ರಕ್ಕೆ ನುಗ್ಗಿದಾಗ ಭಾರತೀಯ ಕೋಸ್ಟ್ ಗಾರ್ಡ್ ಹಡಗುಗಳು ತಡೆಹಿಡಿದು ಬಂಧಿಸಿವೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ದೋಣಿಯಲ್ಲಿ ೨೮೦ ಕೋಟಿ ರೂ. ಮೌಲ್ಯದ ಹೆರಾಯಿನ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಹೆಚ್ಚಿನ ತನಿಖೆಗಾಗಿ ಬೋಟ್ ಮತ್ತು ಅದರ ಸಿಬ್ಬಂದಿಯನ್ನು ಗುಜರಾತ್ನ ಕಚ್ ಜಿಲ್ಲೆಯ ಜಖೌ ಬಂದರಿಗೆ ಕರೆತರಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಭಾರತೀಯ ಕೋಸ್ಟ್ ಗಾರ್ಡ್ ಅಧಿಕಾರಿಗಳು ಬಂಧಿಸಿರುವ ಒಂಬತ್ತು ಸಿಬ್ಬಂದಿಗಳು ಪಾಕಿಸ್ತಾನಿ ಪ್ರಜೆಗಳು ಎನ್ನಲಾಗಿದೆ. ಗುಜರಾತ್ ಕರಾವಳಿಯ ಜಾಖಾವೊ ಮೀನುಗಾರಿಕೆ ಬಂದರಿನ ಬಳಿ ದೋಣಿಯ ಮೂಲಕ ಹೆರಾಯಿನ್ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗಿದೆ. ಎಟಿಎಸ್ ಪಾಕಿಸ್ತಾನದಿಂದ ಡ್ರಗ್ಸ್ ತರುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದು, ಭಾರತೀಯ ಕೋಸ್ಟ್ ಗಾರ್ಡ್ ಸಹಾಯದಿಂದ ಗಡಿಯಾಚೆಯಿಂದ ಬರುತ್ತಿರುವ ದೋಣಿಯನ್ನು ಸೆರೆಹಿಡಿಯಲು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಮಹಿಳೆಯನ್ನು ವಿವಸ್ತçಗೊಳಿಸಿ ಹಲ್ಲೆ - ೯ ಮಂದಿ ವಿರುದ್ಧ ಪ್ರಕರಣ
ಮಂಗಳೂರು, ಏ. ೨೫: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮವೊಂದರಲ್ಲಿ ೯ ಜನರ ಗುಂಪೊAದು ಬುಡಕಟ್ಟು ಮಹಿಳೆಯನ್ನು ವಿವಸ್ತçಗೊಳಿಸಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಗುರಿಪಲ್ಲ ಗ್ರಾಮದಲ್ಲಿ ಅನೇಕ ಗ್ರಾಮಸ್ಥರ ಎದುರಲ್ಲೇ ಏಪ್ರಿಲ್ ೧೯ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಎಲ್ಲಾ ಒಂಬತ್ತು ಆರೋಪಿಗಳ ವಿರುದ್ದವೂ ಕೇಸ್ ದಾಖಲಾಗಿದೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಗ್ಯಾಂಗ್ ತನ್ನ ಬಟ್ಟೆ ಬಿಚ್ಚಿ, ಅರೆಬೆತ್ತಲುಗೊಳಿಸಿ, ವೀಡಿಯೋ ಮಾಡಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ. ಆಕೆಯ ಅಕ್ಕ ಹಾಗೂ ತಾಯಿ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿಗಳನ್ನು ಸಂದೀಪ್ (೩೦) ಸಂತೋಷ್ (೨೯) ಗುಲಾಬಿ(೫೫) ಸುಗುಣಾ (೩೦) ಕುಸುಮಾ (೩೮) ಲೋಕಯ್ಯ(೫೫) ಅನಿಲ್ (೩೫)ಲಲಿತಾ (೪೦) ಮತ್ತು ಚೆನ್ನಕೇಶವ (೪೦) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸಂತ್ರಸ್ತೆಯ ಊರಿನವರೇ ಆಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಧಿಕಾರಿಗಳಿಗೆ ನೀಡಿದ ಅರ್ಜಿಯಂತೆ ದೂರುದಾರ ಮಹಿಳೆ ಮತ್ತು ಆಕೆಯ ಅಕ್ಕ ವಾಸವಿದ್ದ ಸರ್ಕಾರಿ ಜಮೀನನ್ನು ಅಳತೆ ಮಾಡಲು ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಬಂದಾಗ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳ ಸರ್ವೆ ಕಾರ್ಯಕ್ಕೆ ಆರೋಪಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಅಲ್ಲಿಂದ ತೆರಳುವಂತೆ ಒತ್ತಡ ಹೇರಿದ್ದಾರೆ. ನಂತರ ಒಂಬತ್ತು ಮಂದಿ ಮಹಿಳೆ ಮೇಲೆ ಹಲ್ಲೆ ನಡೆಸಿದೆ ಎಂದು ಮೂಲಗಳು ಹೇಳಿವೆ. ಬೆಳ್ತಂಗಡಿ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ
ಬೆಂಗಳೂರು, ಏ. ೨೫: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಕೊಲೆಯಾಗಿರುವ ಘಟನೆ ಕೆಂಗೇರಿಯ ಹರ್ಷ ಲೇಔಟ್ ಬಳಿಯ ರೈಲ್ವೇ ಟ್ರ್ಯಾಕ್ ಬಳಿ ಘಟನೆ ನಡೆದಿದೆ. ಎಂಟಿಎಸ್ ಲೇಔಟ್ನ ನಿವಾಸಿಯಾಗಿರುವ ೨೦ ವರ್ಷದ ಭರತ್ ಎಂಬಾತನನ್ನ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಇವರು ಉಳ್ಳಾಲ ಉಪನಗರದಲ್ಲಿರುವ ಎಲೆಕ್ಟಾçನಿಕ್ಸ್ ಸರಕುಗಳ ಶೋರೂಂನಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಸ್ನೇಹಿತರಿಬ್ಬರ ಜೊತೆ ಕರಗ ನೋಡಲು ಕೊಲೆಯಾದ ಭರತ್ ಬಂದಿದ್ದ, ಈ ವೇಳೆ ಬೈಕ್ನಲ್ಲಿ ಬಂದಿದ್ದ ಆರೋಪಿ ಭರತ್ ಕೈಗೆ ಟಚ್ ಮಾಡಿದ್ದ. ತಕ್ಷಣ ಗಾಡಿ ತಡೆದು ನಿಲ್ಲಿಸಿ ನೋಡ್ಕೊಂಡು ಗಾಡಿ ಓಡಿಸಿ ಎಂದು ಭರತ್ ಮತ್ತು ಸ್ನೇಹಿತರು ಹೇಳಿದ್ದರು. ಈ ವೇಳೆ ಆರೋಪಿ ಮತ್ತು ಭರತ್ ನಡುವೆ ಮಾತಿನ ಚಕಮಕಿ ನಡೆದಿದೆ. ನಿನ್ನ ನೋಡಿಕೊಳ್ತೀನಿ ಅಂತಾ ಹೇಳಿ ಆರೋಪಿ ಹೋಗಿದ್ದ. ಕೆಲ ಹೊತ್ತು ಬಿಟ್ಟು ಮತ್ತೆ ತನ್ನ ಗ್ಯಾಂಗ್ ಕರೆದುಕೊಂಡು ಬಂದು ಭರತ್ ಜೊತೆ ಕಿರಿಕ್ ಮಾಡಿದ್ದಾನೆ. ೮ಕ್ಕೂ ಹೆಚ್ಚು ಜನರನ್ನ ಕರೆ ತಂದಿದ್ದ ಆರೋಪಿ ಕೊಲೆ ಮಾಡಿದ್ದಾನೆ.