*ಗೋಣಿಕೊಪ್ಪ, ಏ. ೨೫: ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಹಾಗೂ ಕ್ಲಿಯರ್‌ಮೆಡಿ ರೇಡಿಯಂಟ್ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರ ನಡೆಯಿತು.
ಗೋಣಿಕೊಪ್ಪ ಕಾವೇರಿ ಮಹಿಳಾ ಸಮಾಜದ ಗ್ರಾ.ಪಂ. ಅಧ್ಯಕ್ಷೆ ಚೈತ್ರ ಬಿ.ಚೇತನ್ ಅವರು ಶಿಬಿರಕ್ಕೆ ಜ್ಯೋತಿ ಬೆಳಗಿ ಚಾಲನೆ ನೀಡಿದರು.
ಗ್ರಾಮದ ಜನರು ಸಾಮಾನ್ಯ ರೋಗಗಳಿಗೆ, ಮೂತ್ರಕೋಶ ಸಂಬAಧಿಸಿದ ರೋಗಗಳಿಗೆ ಮತ್ತು ಇ.ಎನ್.ಟಿ ಸಂಬAಧಿಸಿದ ಕಾಯಿಲೆ ಗಳಿಗೆ ತಜ್ಞರಿಂದ ಚಿಕಿತ್ಸೆ ಪಡೆದು ಕೊಂಡರು. ಸುಮಾರು ೨೦೦ಕ್ಕೂ ಹೆಚ್ಚು ಜನ ಉಚಿತ ಚಿಕಿತ್ಸೆ ಶಿಬಿರದಲ್ಲಿ ಪಾಲ್ಗೊಂಡರು.
ಈ ಸಂದರ್ಭ ಗ್ರಾ.ಪಂ. ಸದಸ್ಯೆ ನೂರೇರ ರತಿ ಅಚ್ಚಪ್ಪ, ಕೊಣಿಯಂಡ ಬೋಜಮ್ಮ, ವಿವೇಕ್ ರಾಯ್ಕರ್, ಸೌಮ್ಯ ಬಾಲು, ಪುಷ್ಪಾ ಮನೋಜ್, ಹಕೀಮ್, ಕ್ಲಿಯರ್‌ಮೆಡೀ ರೇಡಿಯಂಟ್ ಆಸ್ಪತ್ರೆಯ ತಜ್ಞ ವೈದ್ಯರಾದ ಶ್ರೀನಿವಾಸ್ ವೆಂಕಟರಾಮ, ಕಿರಣ್ ಕುಮಾರ್ ಜಿ, ನಿಶಾಂತ್ ಉಪಸ್ಥಿತರಿದ್ದರು.