ಶನಿವಾರಸAತೆ, ಏ. ೨೫: ಇತ್ತೀಚೆಗೆ ಪಟ್ಟಣದಲ್ಲಿ ಭಿನ್ನಕೋಮಿನ ಯುವಕರ ನಡುವೆ ನಡೆದಿದ್ದ ಪ್ರಕರಣ ಹಿನ್ನೆಲೆ ಸೋಮವಾರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ತನ್ಮಯ್, ಸಚಿನ್ ಹಾಗೂ ಇತರರ ಮೇಲೆ ಹಲ್ಲೆ ನಡೆಸಿದ್ದ ೮ ಮಂದಿಯನ್ನು ಬಂಧಿಸಿ ಕ್ರಮಕೈಗೊಳ್ಳುವಂತೆ ಶನಿವಾರಸಂತೆ ಠಾಣೆಯಲ್ಲಿ ದೂರು ನೀಡಲಾಗಿತ್ತು. ನಂತರ ಶೋಧ ಕಾರ್ಯ ಕೈಗೊಂಡ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಸಿಬ್ಬಂದಿ ಸತೀಶ್, ಲೋಕೇಶ್, ಮುರಳಿ, ಕುಮಾರ್ ಅವರು ಗೋಪಾಲಪುರದ ಗ್ರಾಮದಲ್ಲಿ ಆರೋಪಿಗಳಾದ ಗುಂಡೂರಾವ್ ಬಡಾವಣೆಯ ರಬ್ಬಾನಿ, ಶಿರಂಗಾಲ ಗ್ರಾಮದ ಎಸ್.ಎ. ಮಹಮ್ಮದ್ ರಫೀಕ್, ಸುಳುಗಳಲೆ ಕಾಲೋನಿಯ ಅಜೀಜ್ ಖಾನ್ (ಮುದ್ದು) ಹಾಗೂ ಮಹಮ್ಮದ್ ಶೋಯಬ್‌ರನ್ನು ಬಂಧಿಸಿ, ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದೀಗ ನ್ಯಾಯಾಂಗ ಬಂಧನದಲ್ಲಿಡಲಾಗಿದೆ.