ಮಡಿಕೇರಿ, ಏ. ೨೫: ವೀರಾಜಪೇಟೆಯ ಕಂಡAಗಾಲದ ಪ್ರಗತಿ ಸ್ವಸಹಾಯ ಸಂಘದ ವತಿಯಿಂದ ನಿನ್ನೆ ಕುಟ್ಟಂದಿಯ ಕೆ.ಬಿ. ಪ್ರೌಢಶಾಲಾ ಆಟದ ಮೈದಾನದಲ್ಲಿ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಹಾಗೂ ಕೋಳಿಮೊಟ್ಟೆಗೆ ಗುಂಡು ಹಾರಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ರೋಚಕವಾಗಿ ಜರುಗಿದ ಸ್ಪರ್ಧೆಯಲ್ಲಿ ಜಿಲ್ಲೆ ಹಾಗೂ ವಿವಿಧೆಡೆಗಳಿಂದ ಸುಮಾರು ೨೦೦ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. •೨೨, ೧೨ನೇ ಬೋರ್ ಹಾಗೂ ಏರ್ರೈಫಲ್ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಬೆಳಿಗ್ಗೆ ದಾನಿಗಳಾದ ಕೊಲ್ಲೀರ ಬೋಪಣ್ಣ, ಮೇಚಂಡ ಬಾಬ, ಜಿ.ಪಂ. ಮಾಜಿ ಸದಸ್ಯೆ ಅಪ್ಪಂಡೇರAಡ ಭವ್ಯ, ಚೆರಿಯಂಡ ಜಗನಾಣಯ್ಯ, ಎ.ಎನ್. ಪೆಮ್ಮಯ್ಯ, ಶೋಭಾ ಪೆಮ್ಮಯ್ಯ ಅವರುಗಳು ಸ್ಪರ್ಧೆಗೆ ಚಾಲನೆ ನೀಡಿದರು.
ಪ್ರಗತಿ ಸ್ವಸಹಾಯ ಸಂಘದ ಪದಾಧಿಕಾರಿಗಳಾದ ಅಪ್ಪಂಡೇರAಡ ಪೆಮ್ಮಯ್ಯ, ಅಪ್ಪಂಡೇರAಡ ಮೋಹನ್, ನಂಬುಡುಮಾಡ ಪವಿಪೂವಯ್ಯ, ಚಂದೂರ ಪ್ರಭು, ಚಂದೂರ ಸುರೇಶ್ ಗಣಪತಿ, ಅಪ್ಪಂಡೇರAಡ ದಿನು ಸತೀಶ್, ನಂಬುಡುಮಾಡ ಲವ, ಮುಲ್ಲೇಂಗಡ ಜೀವನ್ ಮತ್ತಿತರರು ಹಾಜರಿದ್ದರು.
(ಮೊದಲ ಪುಟದಿಂದ)
ಸ್ಪರ್ಧಾ ವಿಜೇತರ ವಿವರ
೦.೨೨ ರೈಫಲ್ ಶೂಟಿಂಗ್: ಕೇಚಿರ ಶಮನ್ ಬೆಳ್ಳಿಯಪ್ಪ(ಪ್ರಥಮ), ಮಂಡುಡ ಅಜಿತ್(ದ್ವಿತೀಯ) ಹಾಗೂ ಮುಂಡ್ಯೋಳAಡ ದಿನು(ತೃತೀಯ), ಪ್ರಥಮ ಬಹುಮಾನ ರೂ.೨೫೦೦೦ ನಗದು ಹಾಗೂ ಟ್ರೋಫಿಯನ್ನು ಕೊಲ್ಲೀರ ಬೋಪಣ್ಣ ಪ್ರಾಯೋಜಿಸಿದ್ದರು.
ದ್ವಿತೀಯ ಬಹುಮಾನ ರೂ.೨೦೦೦೦ ನಗದು ಹಾಗೂ ಟ್ರೋಫಿಯನ್ನು ಕಂಜಿತAಡ ಸಂಧ್ಯಾ ಉತ್ತಪ್ಪ ಹಾಗೂ ತೃತೀಯ ಬಹುಮಾನ ರೂ.೧೫೦೦೦ ನಗದು ಮತ್ತು ಟ್ರೋಫಿಯನ್ನು ಚಂದುರ ಸಿ.ಬಿದ್ದಪ್ಪ ಪ್ರಾಯೋಜಿಸಿದ್ದರು.
೧೨ ಬೋರ್ ಗನ್ ಶೂಟಿಂಗ್: ಮಧು ಪೆಮ್ಮಂಡ( ಪ್ರಥಮ), ಶ್ಯಾಮ್ ಮಚ್ಚಾಮಾಡ(ದ್ವಿತೀಯ) ಹಾಗೂ ನವೀನ್ ಕಳ್ಳಂಗಡ (ತೃತೀಯ) ಪ್ರಥಮ ಬಹುಮಾನ ರೂ.೨೦ ಸಾವಿರ ನಗದು ಮತ್ತು ಟ್ರೋಫಿ.
(ಪ್ರಾಯೋಜಕರು:ಮೇಚಿಯಂಡ ಬಾಬಾ ಚಿಟ್ಟಿಯಪ್ಪ ಮತ್ತು ಶೋಭಾ ಭೀಮಪ್ಪ), ದ್ವಿತೀಯ ಬಹುಮಾನ ರೂ.೧೫೦೦೦ ನಗದು ಮತ್ತು ಟ್ರೋಫಿ, (ಚೆರಿಯಂಡ ಎಂ.ನಾಣಯ್ಯ) ಹಾಗೂ ತೃತೀಯ ಬಹುಮಾನ ರೂ.೧೦ ಸಾವಿರ ನಗದು ಮತ್ತು ಟ್ರೋಫಿ( ಪ್ರಾಯೋಜಕರು: ಎನ್.ಎಸ್.ಚಿಣ್ಣಪ್ಪ)
ಏರ್ ಗನ್ ರೈಫಲ್ ಶೂಟಿಂಗ್: ಬಡುವಂಡ ಎ.ದೇವಯ್ಯ( ಪ್ರಥಮ) ವಿವೇಕ್ ಹೆಚ್.ಎಸ್.( ದ್ವೀತೀಯ) ಹಾಗೂ ಕುಪ್ಪುಡೀರಪ್ರಖ್ಯಾತ್ ಚಿಣ್ಣಪ್ಪ( ತೃತೀಯ), ವಿಜೇತರಿಗೆ ಕ್ರಮವಾಗಿ ರೂ.೫೦೦೦,ರೂ.೩೦೦೦ ಹಾಗೂ ರೂ.೨೦೦೦ ನಗದು ಹಾಗೂ ಟ್ರೋಫಿ ನೀಡಲಾಯಿತು. ಪ್ರಾಯೋಜಕರು ಕ್ರಮವಾಗಿ ಮೂಕಚಂಡ ಕಮಲ, ನಂಬುಡುಮಾಡ ಸುಚಿತ್ರ ಹಾಗೂ ಮುಲ್ಲೇಂಗಡ ಬಿ.ಜೀವನ್. ಉದಯೋನ್ಮುಖ ಶೂಟರ್ಗಳಾಗಿ( ೧೫ ವಯೋಮಿತಿ) ಮಚ್ಚಾಮಾಡ ಸ್ಮರಣ್, ದಿಶಲ್ ಹಾಗೂ ಮುಂಡ್ಯೋಳAಡ ಭುವನ್ ಅವರನ್ನು ಆಯ್ಕೆಮಾಡಿ ಗೌರವಿಸಲಾಯಿತು.