“ಪ್ರತಿಷ್ಠಾಪನೆಗೂ ಮುನ್ನ ಜ್ಯೋತಿಷಿಗಳ ಮಾರ್ಗದರ್ಶನ ಪಡೆದು ಬೇರೆ ಪುರೋಹಿತರಿಂದ ಪರಿಹಾರ ಕಾರ್ಯಗಳನ್ನು ಮಾಡಿಸಿಕೊಳ್ಳಿ; ನಾನು ಪ್ರತಿಷ್ಠಾಪನೆ ಮಾಡುವುದರಿಂದ ಈ ಕಾರ್ಯ ಮಾಡಲಾಗುವುದಿಲ್ಲ. ಪರಿಹಾರ ಕಾರ್ಯಗಳನ್ನು ಮಾಡದಿದ್ದಲ್ಲಿ ಸಮಿತಿಯವರಿಗೆ ತೊಂದರೆಯಾಗುತ್ತದೆ” ಎಂದು ತಂತ್ರಿಯವರು ನುಡಿದರು. ಅಲ್ಲದೆ, ಇದರ ಪರಿಹಾರದೊಂದಿಗೆ ಪ್ರತಿಷ್ಠಾಪನೆ ಸಂದರ್ಭ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಆದಷ್ಟು ಮಂದಿ ಗುರು ಪೀಠದಲ್ಲಿರುವ ಸ್ವಾಮೀಜಿಗಳನ್ನು ಕರೆಸಿದರೆ ಸಾಕಷ್ಟು ದೋಷ ನಿವಾರಣೆಯಾಗುತ್ತದೆ ಎಂದು ಕೂಡ ಕಿವಿ ಮಾತು ಹೇಳಿದ್ದರು. ಬಳಿಕ ಸಮಿತಿಯಿಂದ ಜ್ಯೋತಿಷಿ ಗೋಪಾಲಕೃಷ್ಣ ಭಟ್ ಅವರ ಮಾರ್ಗದರ್ಶನ ಪಡೆದಾಗ ಗುರುಬಲ ಇಲ್ಲದಿರುವುದರಿಂದ ಸಮಿತಿಯವರಿಗೆ ಪ್ರಾಣಾಪಾಯದಂತಹ ತೊಂದರೆಯಿದೆ. ಮೃತ್ಯುಂಜಯ ಇತ್ಯಾದಿ ಪರಿಹಾರ ಹೋಮಗಳನ್ನು ಮಾಡಿಸಲು ಸೂಚಿಸಿದರು. ಅದರಂತೆ ಪರಿಹಾರ ಕಾರ್ಯ ಮಾಡಿಸುವಾಗಲೇ ಸಮಿತಿಯ ಕೆಲವರಿಗೆ ಅನಾರೋಗ್ಯ, ಸಂಬAಧಿಕರ ಸಾವು, ಕುಟುಂಬದವರಿಗೆ ದಿಢೀರ್ ತೊಂದರೆ ಇತ್ಯಾದಿ ದೋಷಗಳು ಎದುರಾದರೂ ಪ್ರತಿಷ್ಠಾಪನೆಯನ್ನು ಮಾತ್ರ ನಮ್ಮ ಸಮಿತಿ ಕೈ ಬಿಡಲಿಲ್ಲ. ಏಕೆಂದರೆ, ತಂತ್ರಿಯವರು ಹೇಳಿದಂತೆ ಆ ಸಂದರ್ಭ ಕೈ ಬಿಟ್ಟು ಹೋದರೆ, ನಾಲ್ಕು ದೇವತೆಗಳ ಪ್ರತಿಷ್ಠಾಪನೆಗೆ ಒಟ್ಟೊಟ್ಟಿಗೇ ಸುಮುಹೂರ್ತ ಸಿಗುವುದು ಕಷ್ಟಸಾಧ್ಯ. ಮುಂದೂಡಲ್ಪಟ್ಟರೆ, ತಾತ್ಕಾಲಿಕವಾಗಿ ಕೂರಿಸಲ್ಪಟ್ಟಿದ್ದ ಕ್ಷೇತ್ರದ ಅಧಿದೈವಗಳನ್ನು ಬಹು ಕಾಲ ಅದೇ ರೀತಿ ಇರಿಸಿ ಪೂಜೆ ನಡೆಸುವುದಕ್ಕೂ ಕಾಲಾವಕಾಶ ಮೀರಿ ಬಿಡುತ್ತದೆ. ಮತ್ತೆ ಪರಿಸ್ಥಿತಿ ಅನಿಯಂತ್ರಿತವಾಗಿ ನಾಡಿಗೆ, ಭಕ್ತಾದಿಗಳಿಗೂ ಇದು ದುಷ್ಪರಿಣಾಮ ಉಂಟಾಗಬಹುದು ಎಂದು ಪರಿಣಿತರು ಅಭಿಪ್ರ‍್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಿಗದಿತ ದಿನಗಳಂದೇ ಅಷ್ಟಬಂಧ ಬ್ರಹ್ಮ ಕಲಶ ಹಾಗೂ ವಿವಿಧ ಹೋಮ ಹವನಾದಿಗಳೊಂದಿಗೆ ಪುನರ್ ಪ್ರತಿಷ್ಠ್ಠಾಪನೆಯನ್ನು ನಡೆಸುವÀ ಕಾರ್ಯಗಳನ್ನು ವಿಧಿವತ್ತಾಗಿ ನೆರವೇರಿಸಲಾಯಿತು. ಅಲ್ಲದೆ, ಆ ಸಂದರ್ಭ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮಗಳಿಗೆ ಗುರು ಪೀಠದ ಮಾರ್ಗದರ್ಶಕರಾದ ಧರ್ಮಸ್ಥಳ ಮಹಾಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಶ್ರೀಮನ್ಮಧ್ವಾಚಾರ್ಯ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾಗಿದ್ದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು, ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ರಾಮಚಂದ್ರಾಪುರ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿ, ಶ್ರೀ ತಿರುಚ್ಚಿ ಶ್ರೀ ಕೈಲಾಸ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಸಚ್ಚಿದಾನಂದ ಪ್ರಣವ ಸ್ವರೂಪÀ ಶ್ರೀ ಜಯೇಂದ್ರ ಮಹಾಸ್ವಾಮಿಗಳನ್ನು ಭಾಗಮಂಡಲದ ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆಸಿ ಪ್ರತಿಷ್ಠಾಪನೆ ನೆರವೇರಿಸಲಾಯಿತು.೨೦೦೯ ರ ಏಪ್ರಿಲ್‌ನಲ್ಲಿ ಭಾಗಮಂಡಲದಲ್ಲಿ ಅಷ್ಟಬಂಧ, ಬ್ರಹ್ಮ ಕಲಶ ಸಹಿತ ಪುನರ್ ಪ್ರತಿಷ್ಠಾಪನೆಗೆ ಮತ್ತೊಂದು ತೊಡಕುಂಟಾಯಿತು. ಅದೆಂದರೆ, ಆ ಸಂದರ್ಭವೇ ಸಾರ್ವತ್ರಿಕ ಲೋಕಸಭಾ, ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ಹೀಗಾಗಿ ಕೊಡಗಿನ ಶಾಸಕರುಗಳು, ಲೋಕಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಯಾರೂ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿರಲಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿತ್ತು. ಇದನ್ನೇ ನೆಪವಾಗಿಸಿ ಆಗ ಮೈಸೂರು ವಿಭಾಗದ ಚುನಾವಣಾಧಿಕಾರಿಯಾಗಿದ್ದ ಮಣಿವಣ್ಣನ್ ಅವರು ಪ್ರತಿಷ್ಠಾಪನಾ ಕಾರ್ಯವನ್ನಾಗಲಿ, ಯಾವದೇ ಧಾರ್ಮಿಕ ಕಾರ್ಯಕ್ರಮಗಳನ್ನಾಗಲೀ ನಡೆಸಬಾರದೆಂದು ತಾಕೀತು ಮಾಡಿದರು. ಸಮಿತಿಯ ಪರವಾಗಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಧಾರ್ಮಿಕ ವಿಧಿವಿಧಾನಗಳನ್ನು ನಿಲ್ಲಿಸುವಂತಹ ಅಧಿಕಾರ ಯಾರಿಗೂ ಇಲ್ಲ; ಅದೂ ಕೂಡ ಭಾಗಮಂಡಲದAತಹ ಪವಿತ್ರ ಕ್ಷೇತ್ರದಲ್ಲಿ ಪೂರ್ವ ನಿಗದಿಯಾಗಿದ್ದ ಕಾರ್ಯವನ್ನು ನಿಲ್ಲಿಸುವುದಿಲ್ಲ. ನಾವು ಯಾವ ರಾಜಕಾರಣಿ ಅಥವಾ ಸಾರ್ವಜನಿಕ ಪ್ರತಿನಿಧಿಗಳನ್ನೂ ಕಾರ್ಯಕ್ರಮಕ್ಕೆೆ ಕರೆಯುತ್ತಿಲ್ಲ. ಆದರೆ, ಧಾರ್ಮಿಕ ಕಾರ್ಯಕ್ರಮಗಳನ್ನು ನಿಲ್ಲಿಸಿದರೆ, ಅದರ ಪರಿಣಾಮವನ್ನೂ ಅಧಿಕಾರಿಗಳೇ ಎದುರಿಸಬೇಕಾಗುತ್ತದೆ. ಏಕೆಂದರೆ, ರಾಜ್ಯದ ಪರಮ ಪಾವನ ಕ್ಷೇತ್ರಗಳಾದ ರಾಜ್ಯದ ಜನತೆಯ ತೃಷೆಯಡಗಿಸುತ್ತಿರುವ ಕಾವೇರಿ ಕ್ಷೇತ್ರದ ಕಾರ್ಯಕ್ರಮಗಳಿಗೆ ಧಕ್ಕೆ ತರಬೇಡಿ ಎಂದು ಸಮಿತಿಯಿಂದ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದೆವು. ಆ ಬಳಿಕ ಮಣಿವಣ್ಣನ್ ಅವರು ಧಾರ್ಮಿಕ ವಿಧಿ ವಿಧಾನಗಳನ್ನು ಸುಸೂತ್ರವಾಗಿ ನಿರ್ವಹಿಸಲು ಅವಕಾಶ ಮಾಡಿಕೊಟ್ಟರು. ಯಾವದೇ ಜನಪ್ರತಿನಿಧಿಗಳನ್ನು, ರಾಜಕೀಯ ವ್ಯಕ್ತಿಗಳನ್ನು ಸಭೆÀಗೆ ಆಹ್ವಾನಿಸದೆ ಚುನಾವಣಾ ನೀತಿ ಸಂಹಿತೆಯನ್ವಯ ಸಭಾ ಕಾರ್ಯಕ್ರಮಗಳನ್ನು ನಡÉಸÀಬೇಕಾಯಿತು.

ನಿತ್ಯ ಅನ್ನಸಂತರ್ಪಣೆಗೆ ನಾಂದಿ

ಈ ನಡುವೆ ಭಾಗಮಂಡಲದಲ್ಲಿ ಪ್ರತಿಷ್ಠಾಪನಾ ಕಾರ್ಯಗಳ ಸಂದರ್ಭ ನಿರಂತರ ೧೫ ದಿನಗಳ ಕಾಲ ಅನ್ನ ಸಂತರ್ಪಣೆಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಟ್ರಸ್ಟ್ನ ಆಗಿನ ಕಾರ್ಯದರ್ಶಿಯವರು ಚುನಾವಣಾ ನಿರ್ಬಂಧಗಳ ನಡುವೆಯೂ ಅತ್ಯುತ್ಸಾಹದಿಂದ ಎರಡು ಲಾರಿ ಲೋಡುಗಳಷ್ಟು ಅಕ್ಕಿ, ಧಾನ್ಯ, ಬೇಳೆ, ತರಕಾರಿಗಳನ್ನು ಕಳುಹಿಸಿಕೊಟ್ಟರು. ಈ ಸಾಮಗ್ರಿಗಳನ್ನು ಧಾರ್ಮಿಕ ಕಾರ್ಯಕ್ರಮಗಳ ಅವಧಿಯಲ್ಲಿ ಅನ್ನಸಂತರ್ಪಣೆಗೆ ಬಳಸಲಾಯಿತು. ಆದರೆ, ಭಾಗಮಂಡಲದಲ್ಲಿ ೧೫ ದಿನಗಳ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಮುಕ್ತಾಯಗೊಂಡರೂ ಇನ್ನೂ ಬಹಳಷ್ಟು ಪ್ರಮಾಣದಲ್ಲಿ ಅಕ್ಕಿ ಬೇಳೆ ಹಾಗೂ ಇನ್ನಿತರ ಎಲ್ಲ ದಿನಸಿ ಪದಾರ್ಥಗಳು ಸಾಕಷ್ಟು ಉಳಿದುದರಿಂದ ಅಂದಿನಿAದಲೇ ಭಾಗಮಂಡಲದಲ್ಲಿ ನಿತ್ಯ ಅನ್ನಸಂತರ್ಪಣೆ ನಡೆಸಲು ಮುಜರಾಯಿ ಸಮಿತಿ ತೀರ್ಮಾನಿಸಿತು. ಅದಕ್ಕಾಗಿ ಈ ಉಳಿದ ಸಾಮಗ್ರಿಗಳನ್ನು ಪ್ರಾರಂಭಿಕ ಸುಮಾರು ಒಂದು ತಿಂಗಳವರೆÀಗೆ ಬಳಸಿಕೊಳ್ಳಲಾಯಿತು. ಆದರೆ, ಬಳಿಕ ದೇವಾಲಯ ಸಮಿತಿಯು ದಾನಿಗಳಿಂದ ಸಂಗ್ರಹಣೆ ಮೂಲಕ ನಿತ್ಯ ಅನ್ನಸಂತರ್ಪಣೆ ಮುಂದುವರಿಸಿ ಭಾಗಮಂಡಲವು ಒಂದು ಮಹಾನ್ ಕ್ಷೇತ್ರಗಳ ಸಾಲಿಗೆ ಸೇರುವಂತಹ ಕಾರ್ಯಕ್ಕೆ ಭದ್ರ ಅಡಿಪಾಯ ಹಾಕಿತು.

ನೂತನ ಸಮಿತಿಗಳ ರಚನೆ

ಜೀರ್ಣೋದ್ಧಾರ, ಪುನರ್ ಪ್ರತಿಷ್ಠಾಪನೆಗಳ ಬಳಿಕ ತಲಕಾವೇರಿ-ಭಾಗಮಂಡಲ ಕ್ಷೇತ್ರಗಳ ನಿರ್ವಹಣೆಗೆ ನೂತನ ವ್ಯವಸ್ಥಾಪನಾ ಸಮಿತಿ ರಚನೆಗೊಳ್ಳುತ್ತದೆ. ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರು ಸಮಿತಿಯ ಅಧ್ಯಕ್ಷರಾಗಿದ್ದರು. ಅವರ ಅವಧಿಯಲ್ಲಿ ವಸ್ತç ಸಂಹಿತೆ, ನೀತಿ ಸಂಹಿತೆಗಳನ್ನು ಜಾರಿಗೊಳಿಸಿದರು. ಭಕ್ತಾದಿಗಳು ಕ್ಷೇತ್ರಗಳಲ್ಲಿ ಪಾವಿತ್ರö್ಯತೆಯನ್ನು ಕಾಪಾಡಿಕೊಂಡು ಬರುವ ಕುರಿತು ನಿಯಮ ರೂಪಿಸಿದರು. ಭಾಗಮಂಡಲದಲ್ಲಿ ನಿತ್ಯ ಅನ್ನ ಸಂತರ್ಪಣೆಯನ್ನು ಮುಂದುವರಿಸಿದರು.

ಅವರ ಬಳಿಕ ಬಿದ್ದಾಟಂಡ ಎಸ್. ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನೂತನ ಸಮಿತಿಯನ್ನು ಸರಕಾರ ನೇಮಿಸಿತು. ಸಮಿತಿ ಸದಸ್ಯರುಗಳಾಗಿ ಎಸ್. ರವಿಕುಮಾರ್, ಕೋಡಿ ಯು. ಮೋಟಯ್ಯ, ಕೆದಂಬಾಡಿ ಟಿ.ರಮೇಶ್, ಉದಿಯಂಡ ಪಿ.ಸುಭಾಷ್, ಡಾ. ಎಸ್. ಎಂ. ಕಾವೇರಪ್ಪ, ಶ್ರೀಮತಿ ನಿಡ್ಯಮಲೆ ಸುರೇಶ್ ಮೀನಾಕ್ಷಿ, ಕೆ.ಎಸ್. ಅಣ್ಣಯ್ಯ ಹಾಗೂ ಶ್ರೀಮತಿ ಲಕ್ಷಿö್ಮ ವಿ. ಕುಲಕರ್ಣಿ ನೇಮಕಗೊಂಡರು. ತಲಕಾವೇರಿಯಲ್ಲಿ ೨೦೦೬ ರಲ್ಲಿ ಪುನರ್‌ಪ್ರತಿಷ್ಠಾಪನೆಗೊಂಡ ಬಳಿಕ ೧೨ ವರ್ಷ ಕಳೆದಿದ್ದುದರಿಂದ ೨೦೧೮ ರಲ್ಲಿ ತಮ್ಮಯ್ಯ ನೇತೃತ್ವÀ್ವದ ಈ ಸಮಿತಿಯು ತಲಕಾವೇರಿಯಲ್ಲಿ ಬ್ರಹ್ಮ ಕಲಶವನ್ನು ನಡೆಸಲು ನಿಶ್ಚಯಿಸಿತು. ಅದಕ್ಕೂ ಮುನ್ನ ಮತ್ತೆ ಅಷ್ಟಮಂಗಲ ಪ್ರಶ್ನೆಯನ್ನು ಇರಿಸುವ ಮೂಲಕ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ಈ ಸಮಿತಿ ತೀರ್ಮಾನಿಸಿತು. ಅದರಂತೆ, ೨೦೧೮ರ ಮೇ ೨೧ ರಿಂದ ಹಲವು ದಿನಗಳ ಕಾಲ ಸಮಿತಿಯಿಂದ ತಲಕಾವೇರಿಯಲ್ಲಿ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ ನಡೆಯಿತು. ಕೇರಳದ ಜ್ಯೋತಿಶ್ಶಾಸ್ತçಜ್ಞ ಶ್ರೀ ನಾರಾಯಣ ಪೊದುವಾಳ್ ಅವರು ಪ್ರಶ್ನೆ ನಡೆಸಿಕೊಟ್ಟರು. ಕ್ಷೇತ್ರ ತಂತ್ರಿಗಳಾದ ಶ್ರೀ ನೀಲೇಶ್ವರ ಪದ್ಮನಾಭÀ ತಂತ್ರಿ (ಈ ಹಿಂದಿನ ತಂತ್ರಿಯವರ ಪುತ್ರ) ಮಾರ್ಗದರ್ಶನದಲ್ಲಿ ನಿರ್ವಹಿಸಲ್ಟಟ್ಟಿತು. ಚೋದ್ಯಗಾರ ಜ್ಯೋತಿಷಿ ಯಾಗಿ ದಕ್ಷಿಣ ಕನ್ನಡದ ಶ್ಯಾಮ ಶಾಸ್ತಿç ಪಾಲ್ಗೊಂಡಿದ್ದರು. ದೇವಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸರಕಾರದ ಪರ ಜಗದೀಶ್ ಕುಮಾರ್ ಇದ್ದರು. ಅಷ್ಟಮಂಗಲದಲ್ಲಿ ಕೇವಲ ಬ್ರಹ್ಮಕಲಶ ನಡೆಸಲು ಮಾತ್ರವಲ್ಲದೆ ಹಲವಾರು ಬದಲಾವಣೆಗೆ ಸೂಚನೆ ನೀಡಲಾಗಿತ್ತು.

(ಮುಂದುವರಿಯುವುದು)

- ಜಿ. ರಾಜೇಂದ್ರ, ಮಡಿಕೇರಿ.