ವೀರಾಜಪೇಟೆ, ಏ. ೨೩: ಬೇಟೆ ಗೆಂದು ತೆರಳಿದ ಸಂದರ್ಭ ಆಕಸ್ಮಿಕವಾಗಿ ಗುಂಡು ತಗುಲಿ ವ್ಯಕಿಯೋರ್ವ ಮೃತಪಟ್ಟ ಘಟನೆೆ ವೀರಾಜಪೇಟೆ ಹೆಗ್ಗಳ ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟೋಳಿ ಗ್ರಾಮದ ಹಮೀದ್ ಎಂ.ಯು. (೩೬) ಗುಂಡೇಟಿನಿAದ ಮೃತಪಟ್ಟ ವ್ಯಕ್ತಿ.
ಗುಂಡಿಕೆರೆ ನಿವಾಸಿ ರಫೀಕ್ (೩೩) ಮತ್ತು ಅಶ್ರಫ್ (೨೫) ಹಾಗೂ ಮೃತ ಹಮೀದ್ ಪರಿಚಿತರಾಗಿದ್ದು, ಕೆಲ ದಿನಗಳ ಹಿಂದೆ ಮೂವರು ಸೇರಿ ಬೇಟೆಗೆಂದು ತೆರಳುವ ಬಗ್ಗೆ ಮಾತನಾಡಿಕೊಂಡಿದ್ದರು ಎನ್ನಲಾಗಿದೆ. ತಾ. ೨೨ರಂದು ಎಂದಿನAತೆ ಕೂಲಿ ಕೆಲಸ ಮುಗಿಸಿಕೊಂಡು ಹಮೀದ್ ಸಂಜೆಯ ವೇಳೆಗೆ ಮನೆಗೆ ಹಿಂದಿರುಗಿದ್ದಾರೆ. ರಂಜಾನ್ ತಿಂಗಳು ಹಿನ್ನೆಲೆ ಉಪವಾಸ ವ್ರತ ತೆಗೆದು ಪ್ರಾರ್ಥನೆ ಮಾಡಿದ್ದಾರೆ. ತಾಯಿ ನಬೀಸ ಅವರಿಗೆ ಮಸೀದಿಗೆ ಹೋಗಿ ಬರುತ್ತೇನೆ ಎಂದು ಸುಮಾರು ೮ ವೀರಾಜಪೇಟೆ, ಏ. ೨೩: ಬೇಟೆ ಗೆಂದು ತೆರಳಿದ ಸಂದರ್ಭ ಆಕಸ್ಮಿಕವಾಗಿ ಗುಂಡು ತಗುಲಿ ವ್ಯಕಿಯೋರ್ವ ಮೃತಪಟ್ಟ ಘಟನೆÉ ವೀರಾಜಪೇಟೆ ಹೆಗ್ಗಳ ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟೋಳಿ ಗ್ರಾಮದ ಹಮೀದ್ ಎಂ.ಯು. (೩೬) ಗುಂಡೇಟಿನಿAದ ಮೃತಪಟ್ಟ ವ್ಯಕ್ತಿ.
ಗುಂಡಿಕೆರೆ ನಿವಾಸಿ ರಫೀಕ್ (೩೩) ಮತ್ತು ಅಶ್ರಫ್ (೨೫) ಹಾಗೂ ಮೃತ ಹಮೀದ್ ಪರಿಚಿತರಾಗಿದ್ದು, ಕೆಲ ದಿನಗಳ ಹಿಂದೆ ಮೂವರು ಸೇರಿ ಬೇಟೆಗೆಂದು ತೆರಳುವ ಬಗ್ಗೆ ಮಾತನಾಡಿಕೊಂಡಿದ್ದರು ಎನ್ನಲಾಗಿದೆ. ತಾ. ೨೨ರಂದು ಎಂದಿನAತೆ ಕೂಲಿ ಕೆಲಸ ಮುಗಿಸಿಕೊಂಡು ಹಮೀದ್ ಸಂಜೆಯ ವೇಳೆಗೆ ಮನೆಗೆ ಹಿಂದಿರುಗಿದ್ದಾರೆ. ರಂಜಾನ್ ತಿಂಗಳು ಹಿನ್ನೆಲೆ ಉಪವಾಸ ವ್ರತ ತೆಗೆದು ಪ್ರಾರ್ಥನೆ ಮಾಡಿದ್ದಾರೆ. ತಾಯಿ ನಬೀಸ ಅವರಿಗೆ ಮಸೀದಿಗೆ ಹೋಗಿ ಬರುತ್ತೇನೆ ಎಂದು ಸುಮಾರು ೮ ಅವರ ಮಗ ರಫೀಕ್ ಬೇಟೆಗೆಂದು ತೆಗೆದುಕೊಂಡು ಹೋಗಿದ್ದಾನೆ. ರಾತ್ರಿ ಸುಮಾರು ೧೦ ರಿಂದ ೧೦-೩೦ ಗಂಟೆಯ ಮಧ್ಯೆ ಕಾಫಿ ತೋಟ ಮತ್ತು ಅರಣ್ಯ ಪ್ರದೇಶಕ್ಕೆ ಹೊಂದಿಕೊAಡಿರುವ ನಿರ್ಜನ ಪ್ರದೇಶದಲ್ಲಿ ಸಿಡಿಸಿದ ಗುಂಡಿನಿAದ ಮುಳ್ಳುಹಂದಿಯೊAದು ಬಲಿಯಾಗಿದೆ.
(ಮೊದಲ ಪುಟದಿಂದ) ಗುಂಡೇಟಿಗೆ ಬಲಿಯಾದ ಮುಳ್ಳು ಹಂದಿ ಬಳಿ ಹಮೀದ್ನನ್ನು ನೋಡಿಕೊಳ್ಳುವಂತೆ ಹೇಳಿ ಉಳಿದ ಈರ್ವರು ಮುಂದೆ ಸಾಗಿದ್ದಾರೆ. ರಫೀಕ್ ಮತ್ತು ಆಶ್ರಫ್ ಕೆಲವು ಸಮಯದ ನಂತರ ಮತ್ತೊಂದು ಬೇಟೆಗೆ ಸಿದ್ಧತೆ ನಡೆಸುವ ಸಂದರ್ಭದಲ್ಲಿ ಪ್ರಾಣಿಯೊಂದು ಓಡುವ ಸದ್ದಾಗಿದೆ ಪ್ರಾಣಿ ಎಂದು ಭಾವಿಸಿ ರಫೀಕ್ ಗುಂಡು ಹಾರಿಸಿದ್ದಾನೆ. ಪರಿಣಾಮ ಸ್ನೇಹಿತ ಹಮೀದ್ ಎದೆಭಾಗಕ್ಕೆ ಗುಂಡೇಟು ತಗುಲಿದೆ. ೨ ಸುತ್ತುಗಳಲ್ಲಿ ಗುಂಡು ತಗುಲಿದೆ ಎನ್ನಲಾಗಿದೆ. ಚಿಲ್ಲುಗಳು ಚದುರಿದ ಪರಿಣಾಮ ಶರೀರದ ೨೦ ರಿಂದ ೨೨ ಭಾಗಗಳಲ್ಲಿ ಗಾಯಗಳಾಗಿ ತೀವ್ರ ರಕ್ತಸ್ರಾವವಾಗಿದೆ.
ಇದನ್ನು ಗಮನಿಸಿದ ಸ್ನೇಹಿತರು ಮತ್ತೋರ್ವ ಪರಿಚಯಸ್ಥರಿಗೆ ಮಾಹಿತಿ ನೀಡಿದ್ದಾರೆ. ನಂತರದಲ್ಲಿ ಗಾಯಾಳುವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆÀ್ರಗೆ ದಾಖಲಿಸುತ್ತಾರೆ. ವ್ಯಕ್ತಿಯನ್ನು ಪರಿಶೀಲನೆ ಮಾಡಿದ ವೈದ್ಯರು ಮೃತರಾಗಿದ್ದಾರೆ ಎಂದು ಧೃಡಪಡಿಸುತ್ತಾರೆ. ಈ ಘಟನೆ ನಡೆದು ಸುಮಾರು ಎರಡು ಗಂಟೆಯ ನಂತರದಲ್ಲಿ ಗ್ರಾಮದ ಎಲ್ಲಾ ಭಾಗಗಳಲ್ಲಿ ಸುದ್ದಿ ಹರಡಿ ಸುಮಾರು ಮುಂಜಾನೆಯ ೨.೩೦ ರ ವೇಳೆಯಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ಬಂದು ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ಪ್ರಕರಣದ ಮಾಹಿತಿ ಕಲೆಹಾಕುತ್ತಾರೆ.
ಈ ಮಧ್ಯೆ ಪ್ರಕರಣದ ಆರೋಪಿಗಳಾದ ರಫೀಕ್ ಮತ್ತು ಆಶ್ರಫ್ ಕೊವಿಯೋಂದಿಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶರಣಾಗುತ್ತಾರೆ. ಮೃತ ಹಮೀದ್ ಅವರ ತಾಯಿ ನಭೀಸ ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಆರೋಪಿಗಳ ಮೇಲೆ ಕೊಲೆ ಪ್ರಕರಣ ಮತ್ತು ಭಾರತೀಯ ಆಯುಧ ಕಾಯ್ದೆ ಅನ್ವಯ ೩೦೪ ಐ.ಪಿ.ಸಿ ೩.೨೫ ಆಯುಧ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ. ಮೃತ ಶರೀರವನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮೃತ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ..
ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನದಲ್ಲಿಡುವAತೆ ನ್ಯಾಯಾಧೀಶರು ಆದೇಶ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಚೀರ ಎ. ಅಯ್ಯಪ್ಪ ಅವರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.
ಸಮಗ್ರ ತನಿಖೆಗೆ ಆಗ್ರಹ
ಘಟನೆಗೆ ಸಂಬAಧಿಸಿದAತೆ ಬೇಟೆಯ ಸಂದÀರ್ಭದಲ್ಲಿ ಹಮೀದ್ ಮೃತನಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆಯಾದರು. ಘಟನೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ, ಪೊಲೀಸ್ ಇಲಾಖೆಯು ಯಾವುದೇ ಒತ್ತಡಕ್ಕೆ ಮಣಿಯದೆ. ಸಮಗ್ರ ತನಿಖೆ ನಡೆಸಿ ಮೃತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.
- ಕಿಶೋರ್ ಕುಮಾರ್ ಶೆಟ್ಟಿ