ಮಡಿಕೇರಿ, ಏ. ೨೩: ನೈಸರ್ಗಿಕ ಕೃಷಿಯ ಕುರಿತು ಕಿಸಾನ್ ಮೇಳ ತಾ.೨೬ರಂದು ಬೆಳಿಗ್ಗೆ ೧೦.೩೦ ರಿಂದ ಸಂಜೆ ೪.೦ ಗಂಟೆಯ ವರಗೆ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ವಸ್ತು ಪ್ರದರ್ಶನ, ರೈತ ವಿಜ್ಞಾನಿಗಳ ಸಂವಾದ ಮತ್ತು ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಆಸಕ್ತ ರೈತರು ಭಾಗವಹಿಸಬೇಕೆಂದು ಕೃಷಿ ವಿಜ್ಞಾನ ಕೇಂದ್ರ, ಪ್ರಕಟಣೆಯಲ್ಲಿ ಮನವಿ ಮಾಡಿದೆ.