ಶನಿವಾರಸAತೆ, ಏ.೨೩: ತೋಟದ ಕೆಲಸಕ್ಕೆ ಬಾರದ ಮೂವರು ಕೂಲಿಕಾರ್ಮಿಕರನ್ನು ಕರೆದುಕೊಂಡು ಬರಲು ತೆರಳಿದ ರೈತರೊಬ್ಬರು ಅವರಿಂದಲೇ ಹತ್ಯೆಯಾದ ಘಟನೆ ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಮುನ್ಸಿಪಾಲಿಟಿಯಲ್ಲಿ ನಿನ್ನೆ ನಡೆದಿದೆ.

ಹೊಸಮುನ್ಸಿಪಾಲಿಟಿಯ ಕೆ.ಪಿ. ಹಾಲೇಶ್ (೬೦) ಕಾರ್ಮಿಕರಿಂದ ಹತ್ಯೆಯಾದ ರೈತ ಶಾಂತಪುರ ಗ್ರಾಮದ ಕೂಲಿ ಕಾರ್ಮಿಕರಾದ ಕುಮಾರ್, ಎಸ್.ಎನ್. ಶೇಖರ್ ಹಾಗೂ ನಾಗರಾಜು ಆರೋಪಿಗಳು.

ರೈತ ಹಾಲೇಶ್ ಒಂದು ವಾರದ ಮೊದಲು ತಮ್ಮ ತೋಟದ ಕೆಲಸಕ್ಕೆಂದು ಕೂಲಿ ಕಾರ್ಮಿಕರಾದ ಕುಮಾರ್, ಎಸ್.ಎನ್. ಶೇಖರ್ ಹಾಗೂ ನಾಗರಾಜು ಅವರಿಗೆ ಮುಂಗಡ ಹಣ ಕೊಟ್ಟಿದ್ದರು. ಆದರೆ, ಅವರು ಕೆಲಸಕ್ಕೆ ಬಾರದ ಕಾರಣ ನಿನ್ನೆ ಬೆಳಿಗ್ಗೆ ೬ ಗಂಟೆಗೆ ಅವರನ್ನು ಕರೆದುಕೊಂಡು ಬರುವುದಾಗಿ ಪತ್ನಿ ಕೆ.ಎಚ್. ಸುಕನ್ಯಾರಿಗೆ ಹೇಳಿ ಹೋದವರು ಮಧ್ಯಾಹ್ನವಾದರೂ ಮನೆಗೆ ಹಿಂತಿರುಗಿರಲಿಲ್ಲ. ಮಧ್ಯಾಹ್ನ ೩ರ ವೇಳೆಗೆ ಚಂದ್ರಶೇಖರ್ ಎಂಬವರು ಸುಕನ್ಯಾರಿಗೆ ಫೋನ್ ಕರೆ ಮಾಡಿ ಪತಿ ಹಾಲೇಶ್ ಅವರನ್ನು ಕುಮಾರ್, ನಾಗರಾಜ್ ಹಾಗೂ ಶೇಖರ್ ಕುಮಾರನ ಮನೆಯಿಂದ ಎತ್ತಿಕೊಂಡು ಬಂದು ಗೌರಮ್ಮ ಎಂಬವರ ಮನೆ ಪಕ್ಕದ ರಸ್ತೆಯ ಫುಟ್‌ಪಾತ್‌ನಲ್ಲಿ ಮಲಗಿಸುತ್ತಿದ್ದು, ತಮ್ಮನ್ನು ನೋಡಿ ಅಲ್ಲಿಂದ ಪರಾರಿಯಾದರೆಂದು ತಿಳಿಸಿದ ಹಿನ್ನೆಲೆಯಲ್ಲಿ ಸುಕನ್ಯಾ ಸ್ಥಳಕ್ಕೆ ತೆರಳಿ ನೋಡಿದಾಗ ಹಾಲೇಶ್ ದೇಹದಲ್ಲಿ ಗಾಯಗಳಾಗಿ ಮೃತಪಟ್ಟಿರುವುದು ಕಂಡುಬAದಿದೆ. ಈ ಸಂಬAಧ ಹಾಲೇಶ್ ಪತ್ನಿ ಸುಕನ್ಯಾ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ, ಡಿವೈಎಸ್ಪಿ ಶೈಲೇಂದ್ರ, ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಎಎಸ್‌ಐಗಳಾದ ಶಶಿಧರ್, ಶಿವಲಿಂಗ, ಅಪರಾಧ ಪತ್ತೆದಳದ ಲೋಕೇಶ್, ಮುರಳಿ, ಸಿಬ್ಬಂದಿ ಶಶಿಕುಮಾರ್, ಸತೀಶ್, ಕುಮಾರ್ ಭೇಟಿ ನೀಡಿ ಪರಿಶೀಲಿಸಿ, ಆರೋಪಿಗಳಾದ ಕುಮಾರ್, ನಾಗರಾಜ್ ಹಾಗೂ ಶೇಖರ್ ಇವರುಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.