ವೀರಾಜಪೇಟೆ, ಏ. ೨೨: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಿಂದ ಸಕಾಲ ಯೋಜನೆ ೧೦ ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಜನರಿಗೆ ಅರಿವು ಮೂಡಿಸುವ ಸಲುವಾಗಿ ತಾಲೂಕು ಆಡಳಿತ ಹಾಗೂ ಸರ್ವೆ ಇಲಾಖೆ ವತಿಯಿಂದ ಪಟ್ಟಣದ ಗಡಿಯಾರ ಕಂಬದಿAದ ತಾಲೂಕು ಆಡಳಿತ ಸೌಧದವರೆಗೆ ಜಾಥಾ ಹಮ್ಮಿಕೊಳ್ಳಲಾಯಿತು.

ಜಾಥಾದ ನೇತೃತ್ವವನ್ನು ತಹಶೀಲ್ದಾರ್ ಡಾ. ಆರ್. ಯೋಗಾನಂದ್ ವಹಿಸಿದ್ದರು. ಇದೇ ಸಂದರ್ಭ ಗ್ರೇಡ್ ೨ ತಹಶೀಲ್ದಾರ್ ಪ್ರದೀಪ್ ಕುಮಾರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್, ಅಧೀಕ್ಷಕ ಬಿ.ಡಿ. ಅರುಣ, ಶಿರಸ್ತೆದಾರ್ ಪೊನ್ನು, ಆರ್.ಐ.ಗಳಾದ ಹರೀಶ್, ಅನಿಲ್, ಕಂದಾಯ ಹಾಗೂ ಸರ್ವೆ ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.