ಮಡಿಕೇರಿ, ಏ. ೨೨: ಶುಕ್ರವಾರದಿಂದ ಆರಂಭಗೊAಡ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಜಿಲ್ಲೆಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಸುಸೂತ್ರವಾಗಿ ನಡೆಯಿತು.
ಉತ್ಸಾಹದಿಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದರು. ಮೊದಲ ದಿನ ವಾಣಿಜ್ಯ ವಿಭಾಗದ ವ್ಯವಹಾರ ಅಧ್ಯಯನ ವಿಷಯಕ್ಕೆ ಪರೀಕ್ಷೆ ನಡೆಯಿತು. ನೋಂದಣಿಗೊAಡಿದ್ದ ೩೧೨೨ ವಿದ್ಯಾರ್ಥಿಗಳ ಪೈಕಿ ೨೯೮೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಉಳಿದ ೧೪೨ ವಿದ್ಯಾರ್ಥಿಗಳು ಗೈರಾದರು. ೧೭ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.
ಈ ಬಾರಿಯೂ ಕೋವಿಡ್ ನಿಯಮವನ್ನು ಶಿಕ್ಷಣ ಇಲಾಖೆ ಪಾಲಿಸಿತು. ಪರೀಕ್ಷಾ ಕೇಂದ್ರದ ಮುಖ್ಯದ್ವಾರದಲ್ಲಿಯೇ ಥರ್ಮಲ್ ಸ್ಕಾö್ಯನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಒಂದು ಟೇಬಲ್‌ನಲ್ಲಿ ಈರ್ವರು ವಿದ್ಯಾರ್ಥಿ ಕೂರಲು ಅವಕಾಶ ಮಾಡಿ ಕೊಡಲಾಗಿತ್ತು. ಕೊಠಡಿಯ ವಿಸ್ತಿçÃರ್ಣದ
(ಮೊದಲ ಪುಟದಿಂದ) ಅನುಗುಣವಾಗಿ ಕನಿಷ್ಟ ೨೪, ಗರಿಷ್ಠ ೩೦ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಆರೋಗ್ಯ ಸಿಬ್ಬಂದಿಗಳನ್ನು ಹಾಗೂ ಅಂಬ್ಯುಲೆನ್ಸ್ ಒಂದನ್ನು ಎಲ್ಲಾ ಪರೀಕ್ಷಾ ಕೇಂದ್ರಗಳ ಮುಂದೆ ನಿಯೋಜನೆ ಮಾಡಲಾಗಿತ್ತು.
ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ವಿದ್ಯಾರ್ಥಿಗಳು ಧಾರ್ಮಿಕ ಸೂಚಕ ಉಡುಪು ಧರಿಸಿ ಬಂದಿರಲಿಲ್ಲ. ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಅದನ್ನು ತೆಗೆಯಲು ಪ್ರವೇಶ ದ್ವಾರದಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮಡಿಕೇರಿಯ ಖಾಸಗಿ ಕಾಲೇಜೊಂದರ ಉಪನ್ಯಾಸಕಿ ಮಕ್ಕಳಿಗೆ ಪರೀಕ್ಷೆ ಎದುರಿಸುವ ಕುರಿತು ಧೈರ್ಯ ಹೇಳಲು ಬಂದಿದ್ದರು. ಈ ಸಂದರ್ಭ ಜೂನಿಯರ್ ಕಾಲೇಜು ಪ್ರಾಂಶುಪಾಲ ವಿಜಯ ಅವರು ಪರೀಕ್ಷಾ ಸಿಬ್ಬಂದಿ ಅಲ್ಲದೆ ಯಾರಿಗೂ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನೀಡುವುದಿಲ್ಲ ಎಂದರು. ಬಳಿಕ ಪೊಲೀಸರು ಉಪನ್ಯಾಸಕಿಯನ್ನು ಹೊರ ಕಳುಹಿಸಿದರು.