ನಾಪೋಕ್ಲು, ಏ. ೨೨: ನಾಪೋಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಾಲ್ನಾಡ್ ಪ್ಲಾಂರ‍್ಸ್ ರೆಕ್ರಿಯೇಶನ್ ಅಸೋಸಿಯೇಶನ್ ವತಿಯಿಂದ ನಡೆಯುತ್ತಿರುವ ಕೊಡವ ಕಪ್ ಹಾಕಿಯ ಕ್ವಾರ್ಟರ್ ಫೈನಲ್ಸ್ ಪಂದ್ಯಾಟದಲ್ಲಿ ಕಲಿಯಂಡ, ಅರೆಯಡ, ಅಂಜಪರವAಡ, ಕುಲ್ಲೇಟಿರ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಕಲಿಯಂಡ ಮತ್ತು ಕಂಗಾAಡ ತಂಡಗಳ ನಡುವಿನ ಪಂದ್ಯದಲ್ಲಿ ಕಲಿಯಂಡ ತಂಡವು ಕಂಗಾAಡ ತಂಡವನ್ನು ೩-೦ ಗೋಲುಗಳ ಅಂತರದಿAದ ಮಣಿಸಿತು. ಕಲಿಯಂಡ ತಂಡದ ಪರ ಭರತ್ ಎರಡು ಗೋಲು ಗಳಿಸಿದರೆ, ಕಾರ್ಯಪ್ಪ ಒಂದು ಗೋಲು ಗಳಿಸುವದರ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಅರೆಯಡ ಮತ್ತು ಕುಂಡ್ಯೋಳAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅರೆಯಡ ತಂಡವು ಕುಂಡ್ಯೋಳAಡ ತಂಡವನ್ನು ೪-೧ ಗೋಲಿನಿಂದ ಸೋಲಿಸಿ ಗೆಲುವು ಸಾಧಿಸಿತು. ಅರೆಯಡ ತಂಡದ ಪರ ಚಂಗಪ್ಪ ಹಾಗೂ ಬೆಳ್ಯಪ್ಪ ತಲಾ ಎರಡೆರಡು ಗೋಲುಗಳನ್ನು ಗಳಿಸಿ ತಂಡವನ್ನು ಗೆಲ್ಲಿಸಿದರು. ಅಂಜಪರವAಡ ಮತ್ತು ಶಿವಚಾಳಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಂಜಪರವAಡ ತಂಡವು ಶಿವಚಾಳಿಯಂಡ ತಂಡವನ್ನು ೩-೦ ಗೋಲಿನಿಂದ ಪರಾಭವಗೊಳಿಸಿತು. ತಂಡದ ಪರ ಜತಿನ್, ಬೋಪಣ್ಣ ಹಾಗೂ ಚಿರಾಗ್ ತಲಾ ಒಂದೊAದು ಗೋಲು ಗಳಿಸಿದರು. ಕುಲ್ಲೇಟಿರ ಮತ್ತು ಮುಕ್ಕಾಟಿರ ತಂಡಗಳ ನಡುವಿನ ಪಂದ್ಯದಲ್ಲಿ ಕುಲ್ಲೇಟಿರ ತಂಡವು ಮುಕ್ಕಾಟಿರ ತಂಡವನ್ನು ೫-೦ ಗೋಲುಗಳ ಭಾರೀ ಅಂತರದಿAದ ಸೋಲಿಸಿತು. ತಂಡದ ಪರ ಶುಭಂ ಹಾಗೂ ನಿಶ್ಚಲ್ ನಾಚಪ್ಪ ತಲಾ ಎರಡೆರಡು ಗೋಲು ದಾಖಲಿಸಿದರೆ, ಯಾಶಿಕ್ ಮುತ್ತಣ್ಣ ಒಂದು ಗೋಲು ಗಳಿಸಿ ಗೆಲುವಿನ ನಗೆ ಬೀರಿದರು.
ನಾಳೆ ಸಮಾರೋಪ
ಪಂದ್ಯಾವಳಿಯ ಅಂತಿಮ ಪಂದ್ಯ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ನಾಲ್ನಾಡ್ ಪ್ಲಾಂರ‍್ಸ್ ರಿಕ್ರಿಯೇಶನ್ ಅಸೋಸಿಯೇಶನ್ ಅಧ್ಯಕ್ಷ ಬಾಚಮಂಡ ಲವಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಮಂಡೇಪAಡ ಸುಜಕುಶಾಲಪ್ಪ, ಶಾಂತೆಯAಡ ವೀಣಾಅಚ್ಚಯ್ಯ, ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಪೊಲೀಸ್ ವರಿಷ್ಠಾಧಿಕಾರಿ ಮಲ್ಚೀರ ಎ. ಅಯ್ಯಪ್ಪ, ಮುಖ್ಯ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ತೀತಿರ ಎನ್. ಅಪ್ಪಚ್ಚು, ಹೈಕೋರ್ಟ್ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯವಾದಿ ಮೇರಿಯಂಡ ಸಜನ್‌ಪೂವಯ್ಯ, ನಿವೃತ್ತ ಡಿಎಫ್‌ಒ ಮುಕ್ಕಾಟಿರ ಎಂ. ಜಯ, ಕಾಫಿ ಬೆಳೆಗಾರರಾದ ಬೊಳ್ಳಚೆಟ್ಟೀರ ಸುರೇಶ್, ಕುಂಚೆಟ್ಟೀರ ಸುಧಿ ಉತ್ತಪ್ಪ, ಕಲಿಯಂಡ ಸಿ.ನಾಣಯ್ಯ, ಹಾಗೂ ವಕೀಲ ಜಯಪ್ರಕಾಶ್‌ರಾವ್ ಪಾಲ್ಗೊಳ್ಳಲಿದ್ದಾರೆ.