ಚೆಯ್ಯಂಡಾಣೆ, ಏ. ೨೨: ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದು ಫಲಿತಾಂಶ ಘೋಷಣೆಯಾಗಿದೆ.
ಚೆಯ್ಯಂಡಾಣೆಯ ಲಕ್ಷಿö್ಮ ಮಹಿಳಾ ಸಮಾಜದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಒಟ್ಟು ೧೩ ಸ್ಥಾನದಲ್ಲಿ ೧ ಕ್ಷೇತ್ರ ಸಾಲಗಾರರಲ್ಲದ ಹಾಗೂ ಉಳಿದ ೧೨ ಸ್ಥಾನ ಸಾಲಗಾರರ ಕ್ಷೇತ್ರವಾಗಿದೆ.
ಸಾಲಗಾರರ ಸಾಮಾನ್ಯ ವರ್ಗಕ್ಕೆ ೬ ಸ್ಥಾನ, ಸಾಲಗಾರರ ಪರಿಶಿಷ್ಟ ಪಂಗಡ ವರ್ಗಕ್ಕೆ ಒಂದು ಸ್ಥಾನ, ಸಾಲಗಾರರ ಪರಿಶಿಷ್ಟ ಜಾತಿ ವರ್ಗಕ್ಕೆ ಒಂದು ಸ್ಥಾನ, ಸಾಲಗಾರರ ಮಹಿಳಾ ಸದಸ್ಯರಿಗೆ ಎರಡು ಸ್ಥಾನ, ಹಿಂದುಳಿದ ವರ್ಗದ (ಪವರ್ಗ-ಎ) ಸದಸ್ಯರಿಗೆ ಒಂದು ಸ್ಥಾನ, ಹಿಂದುಳಿದ ವರ್ಗದ (ಪ್ರವರ್ಗ- ಬಿ) ಸದಸ್ಯರಿಗೆ ಒಂದು ಸ್ಥಾನವಿದ್ದು, ತೀವ್ರ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಸಾಲಗಾರರ ಹಿಂದುಳಿದ ವರ್ಗದ (ಪ್ರವರ್ಗ -ಬಿ)ಯ ಅಭ್ಯರ್ಥಿ ಕೆ.ಯು. ರಾಧಾಕೃಷ್ಣ ಹಾಗೂ ಸಾಲಗಾರರ ಪರಿಶಿಷ್ಟ ಪಂಗಡ ಅಭ್ಯರ್ಥಿ ನಂಜಪ್ಪ ಕೆ.ಎ. ಅವಿರೋಧ ಆಯ್ಕೆ ಯಾದರು. ಇನ್ನುಳಿದ ಸ್ಥಾನಗಳ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸಿ.ಟಿ. ಚಂಗಪ್ಪ (೨೪೦ ಮತಗಳು) ಬಿದ್ದಂಡ ಎಂ. ಅಚ್ಚಯ್ಯ (೨೨೯) ಬಿ.ಎಸ್. ಹರಿಪ್ರಸಾದ್ (೨೦೫) ಎಂ.ಎA. ಗಣಪತಿ (೧೯೩) ಪಟ್ಟಚೇರುವಳಂಡ ಪಿ. ಪ್ರತಾಪ್ (೧೮೪) ಅಚ್ಚಯ್ಯ ಬಿ.ಸಿ. (೧೭೫) ಮತಗಳನ್ನು ಪಡೆದು ವಿಜಯಶಾಲಿಯಾದರೆ, ಕುಮ್ಮಂಡ ಎ. ಮಾದಪ್ಪ (೧೬೭) ಎಂ.ಜಿ. ಚಂಗಪ್ಪ (೧೫೬) ಚೇನಂಡ ಗಿರೀಶ್ ಪೂಣಚ್ಚ (೧೫೫) ಮತಗಳನ್ನು ಪಡೆದು ಪರಾಭವಗೊಂಡರು. ಸಾಲಗಾರರ ಮಹಿಳಾ ವರ್ಗದ ಅಭ್ಯರ್ಥಿ ಎಂ.ಕೆ. ರೇಣು (೨೨೨) ಬಟ್ಟಿಯಂಡ ಉಷಾ ಜಯರಾಮ್ (೨೦೫) ವಿಜಯಿಶಾಲಿಯಾದರೆ ಎಂ.ಎ. ಮಾಚಮ್ಮ (೧೬೮) ಮತ ಪಡೆದು ಪರಭಾವಗೊಂಡರು. ಸಾಲಗಾರರ ಹಿಂದುಳಿದ ಪ್ರವರ್ಗ-ಬಿ ಅಭ್ಯರ್ಥಿ (೧೮೮) ಮತಗಳನ್ನು ಪಡೆದು ಜಯಶಾಲಿಯಾದರೆ ಕುಪೋಡಂಡ ಶಾಫಿ (೧೪೮) ಮತ ಪಡೆದು ಪರಾಜಯಗೊಂಡರು.
ಸಾಲಗಾರರ ಪರಿಶಿಷ್ಟ ಜಾತಿ ಅಭ್ಯರ್ಥಿ ಪಿ.ಕೆ. ಗಣೇಶ್ (೧೭೩) ವಿಜಯಿಶಾಲಿಯಾದರೆ ಪುತ್ರ ಪಿ.ಜೆ. (೧೫೭) ಮತ ಪಡೆದು ಪರಾಜಯ ಗೊಂಡರು. ಸಾಲಗಾರರಲ್ಲದ ಕ್ಷೇತ್ರ ಭಾರೀ ಕುತೂಹಲ ಮೂಡಿಸಿದ್ದು, ಇಬ್ಬರು ಸಮಬಲದ ಹೋರಾಟದಲ್ಲಿ ಅಭ್ಯರ್ಥಿಗಳಾದ ಮುಂಡಿಯೋಳAಡ ದೇವಯ್ಯ ಹಾಗೂ ಪೊಕ್ಕುಳಂಡ್ರ ಎಸ್. ಅಭಿಲಾಷ್ ತಲಾ ೩೩ ಮತಪಡೆದರು. ಅಂತಿಮವಾಗಿ ಲಾಟರಿ ಎತ್ತುವುದರ ಮೂಲಕ ಮೊದಲ ಎರಡೂವರೆ ವರ್ಷಕ್ಕೆ ದೇವಯ್ಯ ಆಯ್ಕೆಯಾದರು.
ಮತಗಟ್ಟೆಯ ಉಸ್ತುವಾರಿಯನ್ನು ಸಂದೀಪ್ ಪಿ.ಜಿ, ಕವಿತಾ ಪಿ.ಎನ್. ಪುಷ್ಪಲತಾ, ಮೋಹನ್ ಬಿ.ಜಿ. ವಹಿಸಿ ದ್ದರು. ನಾಪೋಕ್ಲು ಠಾಣಾಧಿಕಾರಿ ಎಂ.ಕೆ. ಸದಾಶಿವ ನೇತೃತ್ವದಲ್ಲಿ ಸಿಬ್ಬಂದಿಗಳಾದ ನವೀನ್, ಮಾಚಯ್ಯ, ಶರತ್, ಶರೀಫ್ ಕೆ.ಈ. ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.