ನಾಪೋಕ್ಲು, ಏ. ೨೧: ನಾಪೋಕ್ಲು ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಾಲ್ಕುನಾಡು ಪ್ಲಾಂರ‍್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ ನಾಲ್ನಾಡ್ ಕೊಡವ ಕಪ್ ಹಾಕಿ ಕ್ರೀಡಾಕೂಟದ ನಾಲ್ಕನೇ ದಿನದ ಪಂದ್ಯದಲ್ಲಿ ಕಲಿಯಂಡ, ಕಂಗಾAಡ, ಕುಂಡ್ಯೋಳAಡ, ಅರೆಯಡ, ಅಂಜಪರವAಡ, ಶಿವಚಾಳಿಯಂಡ, ಮುಕ್ಕಾಟಿರ, ಮತ್ತು ಕುಲ್ಲೇಟಿರ ತಂಡಗಳು ಜಯಗಳಿಸಿವೆ. ಮೈದಾನ ೧ ರಲ್ಲಿ ನಡೆದ ಪಂದ್ಯದಲ್ಲಿ ಕಲಿಯಂಡ ತಂಡವು ಕೇಲೇಟಿರ ತಂಡದ ವಿರುದ್ಧ ೪ ಗೋಲುಗಳ ಜಯ ಸಾಧಿಸಿತು. ಕೇಲೇಟಿರ ತಂಡವು ಯಾವುದೇ ಗೋಲು ಗಳಿಸಲಿಲ್ಲ. ಎರಡನೇ ಪಂದ್ಯದಲ್ಲಿ ಕೋಟೆರ ತಂಡವು ಯಾವುದೇ ಗೋಲು ಗಳಿಸದೆ ಕಂಗಾAಡ ತಂಡದ ವಿರುದ್ಧ ಸೋಲು ಅನುಭವಿಸಿತು. ಕುಂಡ್ಯೋಳAಡ ಮತ್ತು ಅಪ್ಪಚ್ಚಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಂಡ್ಯೋಳAಡ ತಂಡವು ೧-೦ ಅಂತರದ ಗೆಲುವು ಸಾಧಿಸಿತು. ಪೊನ್ನೋಲತಂಡ ಮತ್ತು ಅರೆಯಡ ತಂಡಗಳ ನಡುವೆ ನಡೆದ ಬಿರುಸಿನ ಪಂದ್ಯದಲ್ಲಿ ಅರೆಯಡ ತಂಡವು ೫ ಗೋಲು ಗಳಿಸಿ ಮುನ್ನಡೆ ಸಾಧಿಸಿತು. ಪೊನ್ನೋಲತಂಡ ತಂಡ ೪ ಗೋಲು ಗಳಿಸಿ ಸೋಲು ಅನುಭವಿಸಿತು.
ಎರಡನೇ ಮೈದಾನದಲ್ಲಿ ನಡೆದ ಅಂಜಪರವAಡ ಮತ್ತು ಪಟ್ರಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಂಜಪರವAಡ ತಂಡವು ೩ ಗೋಲುಗಳಿಂದ ಗೆಲುವು ಸಾಧಿಸಿತು. ಶಿವಚಾಳಿಯಂಡ ಹಾಗೂ ಕುಮ್ಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಶಿವಚಾಳಿಯಂಡ ತಂಡವು ೩-೧ ಅಂತರದ ಗೆಲುವು ಸಾಧಿಸಿತು. ಮಾಚಂಡ ಮತ್ತು ಮುಕ್ಕಾಟಿರ ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡ ೧ ಗೋಲು ಹೊಡೆದು ಜಯ ಸಾಧಿಸಿತು. ಮಾಚಂಡ ತಂಡ ಯಾವುದೇ ಗೋಲು ಗಳಿಸಲಿಲ್ಲ. ಚೌರೀರ ಮತ್ತು ಕುಲ್ಲೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಿAದ ಕುಲ್ಲೇಟಿರ ತಂಡ ಮುನ್ನಡೆ ಸಾಧಿಸಿತು.