ಚೆಯ್ಯಂಡಾಣೆ, ಏ. ೨೧: ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಚೆಯ್ಯಂಡಾಣೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ನಿವೃತ್ತ ಹೈಕೋರ್ಟ್ ವಕೀಲ ಪೊಕ್ಕುಳಂಡ್ರ ಅಪ್ಪಾಜಿ ಹಾಗೂ ಅವರ ಪತ್ನಿ ಪದ್ಮಾವತಿ ಅವರನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸನ್ಮಾನಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಜಿ. ಬೋಪಯ್ಯ ೧೯೭೧ರಲ್ಲಿ ಬಿಜೆಪಿ ಪಕ್ಷಕ್ಕೆ ಸಕ್ರಿಯವಾಗಿ ಸಂಘಟನೆಯನ್ನು ರೂಪುಗೊಳಿಸಲು ಪಾತ್ರವಹಿಸಿದ ಹಿರಿಯರನ್ನು ಗೌರವಿಸುವ ಸಲುವಾಗಿ ಬಿಜೆಪಿಯಿಂದ ಚೆಯ್ಯಂಡಾಣೆ ಶಕ್ತಿ ಕೇಂದ್ರಕ್ಕೆ ಒಳಪಟ್ಟ ನಿವೃತ್ತ ಹೈಕೋರ್ಟ್ ವಕೀಲ ಪೊಕ್ಕುಳಂಡ್ರ ಅಪ್ಪಾಜಿ ಅವರನ್ನು ಈ ಭಾಗದಲ್ಲಿ ಜನ ಆಯ್ಕೆ ಮಾಡಿದ್ದಾರೆ. ಇವರು ೧೯೭೨ ರಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದು, ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
ಈ ಸಂದರ್ಭ ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ ತಮ್ಮಯ್ಯ, ಶಕ್ತಿ ಕೇಂದ್ರದ ಅಧ್ಯಕ್ಷ ದನೋಜ್ ಪೊಕ್ಕುಳಂಡ್ರ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪವನ್ ತೋಟಂಬೈಲ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ವಿಷ್ಣು, ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೆಳಿಯಂಡ್ರ ರತೀಶ್ ಕುಮಾರ್, ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅನಂತ್ ಕುಮಾರ್ ತೋಟಂಬೈಲ್, ಪಕ್ಷದ ಕಾರ್ಯಕರ್ತರಾದ ಪೊಕ್ಕುಳಂಡ್ರ ಮನೋಜ್, ಮನೋಹರ್, ರವಿ ಬೋಪಯ್ಯ, ತನು, ದಿಲೀಪ್, ಮಕ್ಕಿಮನೆ ಸುಧಿರ್, ಮುಡ್ಯೋಳಂಡ ಸಜನ್ ನಂಜುAಡ ಇನ್ನಿತರರು ಹಾಜರಿದ್ದರು.