ನಾಪೋಕ್ಲು, ಏ. ೨೦: ನಾಪೋಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಾಲ್ನಾಡ್ ಪ್ಲಾಂರ‍್ಸ್ ರೆಕ್ರಿಯೇಶನ್ ಅಸೋಸಿಯೇಶನ್ ವತಿಯಿಂದ ನಡೆಯುತ್ತಿರುವ ಕೊಡವ ಕಪ್ ಹಾಕಿಯ ಮೂರನೆಯ ದಿನದ ಪಂದ್ಯಾಟದಲ್ಲಿ ಶಿವಚಾಳಿಯಂಡ, ಮಾಚಂಡ, ಮುಕ್ಕಾಟಿರ, ಚೌರೀರ, ಕುಲ್ಲೇಟಿರ, ಕಂಗಾAಡ, ಕುಂಡ್ಯೋಳAಡ, ಅಪ್ಪಚ್ಚಿರ, ಪೊನ್ನೋಲತಂಡ, ಅರೆಯಡ ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿವೆ.
ಮೈದಾನ ಒಂದರಲ್ಲಿ ನಡೆದ ಬೊಟ್ಟೋಳಂಡ ಮತ್ತು ಶಿವಚಾಳಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಶಿವಚಾಳಿಯಂಡ ತಂಡವು ಬೊಟ್ಟೋಳಮಡ ತಂಡವನ್ನು ೨-೦ ಗೋಲುಗಳ ಅಂತರದಿAದ ಮಣಿಸಿತು. ನೆರವಂಡ ಮತ್ತು ಮಾಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾಚಂಡ ತಂಡವು ನೆರವಂಡ ತಂಡವನ್ನು ೩-೦ ಗೋಲಿನಿಂದ ಸೋಲಿಸಿ ಗೆಲುವು ಸಾಧಿಸಿತು. ಕಾಂಡAಡ ಮತ್ತು ಮುಕ್ಕಾಟಿರ ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡವನ್ನು ೪-೨ ಗೋಲಿನಿಂದ ಪರಾಭವ ಗೊಳಿಸಿತು. ಚೌರೀರ ಮತ್ತು ಮೇರಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೌರೀರ ತಂಡವು ಮೇರಿಯಂಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿ ಮುನ್ನಡೆ ಸಾಧಿಸಿತು. ಕನ್ನಂಬಿರ ಮತ್ತು ಕುಲ್ಲೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಕುಲ್ಲೇಟಿರ ತಂಡವು ಕನ್ನಂಬಿರ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿ ಗೆಲುವಿನ ನಗೆ ಬೀರಿತು.
ಮೈದಾನ ಎರಡರಲ್ಲಿ ನಡೆದ ಕಂಗಾAಡ ಮತ್ತು ಚೋಯಮಾಡಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಂಗಾAಡ ತಂಡವು ಚೋಯಮಾಡಂಡ ತಂಡವನ್ನು ೨-೦ ಗೋಲಿನಿಂದ ಮಣಿಸಿತು. ಕುಂಡ್ಯೋಳAಡ ಮತ್ತು ಬಾಳೆಯಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಂಡ್ಯೋಳAಡ ತಂಡವು ಬಾಳೆಯಡ ತಂಡವನ್ನು ೩-೨ ಗೋಲು ಗಳಿಂದ ಸೋಲಿಸಿ ವಿಜಯಶಾಲಿಯಾಯಿತು. ಅಪ್ಪಚ್ಚಿರ ಮತ್ತು ಅಲ್ಲಾರಂಡ ತಂಡಗಳ ನಡುವಿನ ಸೆಣಸಾಟದಲ್ಲಿ ಅಪ್ಪಚ್ಚಿರ ತಂಡವು ಅಲ್ಲಾರಂಡ ತಂಡವನ್ನು ೬-೫ ಗೋಲುಗಳ ಅಂತರದಿAದ ಸೋಲಿಸಿ ವಿಜಯಪತಾಕೆ ಹಾರಿಸಿತು. ಕೇಟೋಳಿರ ಮತ್ತು ಪೊನ್ನೋಲತಂಡ ತಂಡಗಳ ನಡುವಿನ ಪಂದ್ಯದಲ್ಲಿ ಪೊನ್ನೋಲತಂಡ ತಂಡವು ಕೇಟೋಳಿರ ತಂಡವನ್ನು ೨-೦ ಗೋಲಿನ ಅಂತರದಿAದ ಸೋಲಿಸಿ ಮುನ್ನಡೆ ಸಾಧಿಸಿತು. ಮಣವಟ್ಟಿರ ಮತ್ತು ಅರೆಯಡ ತಂಡಗಳ ನಡುವಿನ ಪಂದ್ಯದಲ್ಲಿ ಅರೆಯಡ ತಂಡವು ಮಣವಟ್ಟಿರ ತಂಡವನ್ನು ೭-೬ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.