ಮಡಿಕೇರಿ, ಏ. ೨೦: ಕೊಡಗು ಹಿಂದೂ ಮಲಯಾಳಿ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ೯ನೇ ವರ್ಷದ ಹಿಂದೂ ಮಲಯಾಳಿ ಬಾಂಧವರ ಕ್ರಿಕೆಟ್ ಪಂದ್ಯಾಟ ತಾ. ೨೯, ೩೦ ಹಾಗೂ ಮೇ ೧ ರಂದು ಚೆನ್ನಯ್ಯನಕೋಟೆ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಹಿಂದೂ ಮಲೆಯಾಳಿ ಸಂಘದ ಜಿಲ್ಲಾಧ್ಯಕ್ಷ ವಿಜಯ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾ ಕೂಟದಲ್ಲಿ ಆಯಾ ಊರಿನ ಆಟಗಾರರ ತಂಡಕ್ಕೆ ಮಾತ್ರ ಆಡಲು ಅವಕಾಶವಿದೆ. ಅತಿಥಿ ಆಟಗಾರರು ಪಾಲ್ಗೊಳ್ಳುವಂತಿಲ್ಲ. ಈ ಬಾರಿ ೪೦ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಹೆಸರು ನೋಂದಾಯಿಸಿಕೊಳ್ಳಲು ತಾ. ೨೫ ಕೊನೆಯ ದಿನಾಂಕವಾಗಿರುತ್ತದೆ. ವಿಜೇತರಿಗೆ ಪ್ರಥಮ ಬಹುಮಾನ ೨೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ೧೫ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ. ಮೇ ೧ರಂದು ಸಂಜೆ ಸಮಾಜ ಬಾಂಧವರಿಗೆ ಮನರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ರವೀಂದ್ರ- ೯೫೩೫೪೨೨೩೦೩, ದರ್ಶನ್- ೯೪೪೮೭೦೪೪೧೯ ಸಂಪರ್ಕಿಸುವAತೆ ಮನವಿ ಮಾಡಿದರು.

ತಾ. ೧೮ರಂದು ಶ್ರೀ ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ ಚೆನ್ನಯ್ಯನ ಕೋಟೆ ನೂತನ ಮಲಯಾಳಿ ಸಮಾಜ ರಚನೆಯಾಯಿತು. ಅಧ್ಯಕ್ಷ ರಾಗಿ ಮಧುಸೂದನ್, ಉಪಾಧ್ಯಕ್ಷ ರಾಗಿ ಸುರೇಶ್ ಎಂ.ವಿ, ವಿಜು ಎಂ.ಎನ್, ಪ್ರಧಾನ ಕಾರ್ಯದರ್ಶಿ ಬಾಬು ಎನ್.ಆರ್, ಸಹ ಕಾರ್ಯ ದರ್ಶಿ ಶಶಿ ಅಚ್ಚುದನ್ ಆರ್.ಎ, ಖಜಾಂಚಿ ಅನಿಲ್ ಎಂ.ಆರ್, ಗೌರವಾಧ್ಯಕ್ಷರಾಗಿ ಅಪ್ಪು ಕೆ.ಕೆ, ಶಿವದಾಸ್ ಕೆ.ಕೆ, ಸಜೇಶ್ ಪಿ.ಎಸ್, ಕ್ರೀಡಾ ಸಮಿತಿ ಅಧ್ಯಕ್ಷ ರವೀಂದ್ರ ಬಾವೆ, ಕ್ರೀಡಾ ಸಮಿತಿ ಪದಾಧಿಕಾರಿ ಗಳಾಗಿ ವಿನು ಕುಮಾರ್ ಎನ್.ಆರ್, ಬನೋಜ್ ಎನ್.ಆರ್, ಅಭಿಜಿತ್ ನಾಯರ್, ವಿನಿದ್ ಆಯ್ಕೆಯಾಗಿ ದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸುಧೀರ್, ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರದೀಶ್, ಕಾರ್ಯದರ್ಶಿ ದರ್ಶನ್, ಕ್ರೀಡಾ ಸಮಿತಿ ಅಧ್ಯಕ್ಷ ರವೀಂದ್ರ ಬಾವೆ ಹಾಜರಿದ್ದರು.