ಮಡಿಕೇರಿ, ಏ. ೨೦: ಕೊಡಗು ಮೂಲದ ಅಚ್ಚುಡ ಆರತಿ ಹರೀಶ್ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ನಡೆಸುತ್ತಿರುವ ಸಾಧ್ಯ ವಸತಿಯುತ ವಿಶೇಷಚೇತನ ಮಕ್ಕಳ ಶಾಲೆಗೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿದ್ದರು. ಕೊಡಗಿನಲ್ಲೂ ಇಂತಹ ಶಾಲೆಯನ್ನು ತೆರೆಯುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ ಅಚ್ಚುಡ ಆರತಿ ಸಹಕಾರ ನೀಡುವಂತೆ ಶಾಸಕರಿಗೆ ಮನವಿ ಮಾಡಿದರು.