ಸೋಮವಾರಪೇಟೆ,ಏ.೨೦: ಮಸೀದಿಗಳಲ್ಲಿ ಆಜಾನ್ಗಾಗಿ ಅಳವಡಿಸಿರುವ ಧ್ವನಿವರ್ಧಕಗಳಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಕಾನೂನು ಪ್ರಕಾರವಾಗಿ ಇವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸೋಮವಾರಪೇಟೆ ಪಟ್ಟಣದ ಮಡಿಕೇರಿ ರಸ್ತೆ ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದಲ್ಲಿರುವ ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಅಳವಡಿಸಿ ಆಜಾನ್ ಕೂಗುತ್ತಿದ್ದು, ಇದರಿಂದ ಸ್ಥಳೀಯರು ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಆಸ್ಪತ್ರೆಗೆ ಆಗಮಿಸುವ ಹೊರ ರೋಗಿಗಳು ಹಾಗೂ ಚಿಕಿತ್ಸೆಗಾಗಿ ದಾಖಲಾಗಿರುವ ಒಳರೋಗಿಗಳು ತೊಂದರೆ ಎದುರಿಸುತ್ತಿದ್ದಾರೆ. ಬೆಳಿಗ್ಗೆ ೪ ಗಂಟೆಗೆ ಬಾಂಗ್ ಕೂಗಲಾಗುತ್ತಿದ್ದು, ರೋಗಿಗಳು ಅದರಲ್ಲೂ ಹೃದಯ ಸಂಬAಧಿ ಖಾಯಿಲೆ ಇರುವವರಿಗೆ ತೊಂದರೆಯಗುತ್ತಿದೆ ಎಂದು ಆರೋಪಿಸಿದ ಕಾರ್ಯಕರ್ತರು, ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಲೌಡ್ ಸ್ಪೀಕರ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲು ಸಂಬAಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ೧೧ ಡೆಸಿಬಲ್ ಮೀರದಂತೆ ಧ್ವನಿವರ್ಧಕ ಇರಬೇಕು. ರಾತ್ರಿ ೧೦ ರಿಂದ ಬೆಳಿಗ್ಗೆ ೬ ರವರೆಗೆ ಲೌಡ್ ಸ್ಪೀಕರ್ ಬಳಸಬಾರದು ಎಂಬಿತ್ಯಾದಿ ನಿಯಮಗಳಿದ್ದರೂ ಇವುಗಳನ್ನು ಗಾಳಿಗೆ ತೂರಲಾಗಿದೆ ಎಂದು ಭಜರಂಗದಳ ತಾಲೂಕು ಸಂಚಾಲಕ ನೇಗಳ್ಳೆ ಜೀವನ್ ಹೇಳಿದರು. ಧ್ವನಿವರ್ಧಕಗಳ ವೇಗ ನಿಯಂತ್ರಿಸುವ ಬಗ್ಗೆ ಸುಪ್ರಿಂ ಕೋರ್ಟ್ ಹಾಗೂ ಹೈಕೋರ್ಟ್ ಹಲವು ಬಾರಿ ತೀರ್ಪು ಕೊಟ್ಟಿದ್ದರೂ ಜಾರಿಗೆ ಬಂದಿಲ್ಲ. ಈ ಎರಡು ಮಸೀದಿಗಳಲ್ಲಿ ದಿನಕ್ಕೆ ೫ ಬಾರಿ ಆಜಾನ್ ಕೂಗಲಾಗುತ್ತಿದ್ದು, ೧೧ ಡೆಸಿಬಲ್ ಬದಲಾಗಿ ೩೦ ರಿಂದ ೪೦ ಡೆಸಿಬಲ್ಗಳಲ್ಲಿ ಶಬ್ದ ಹೊರಬರುತ್ತಿದೆ. ದಿನಕ್ಕೆ ೧ ರಿಂದ ೨ ಬಾರಿ ನಿಯಂತ್ರಿತ ಶಬ್ದದೊಂದಿಗೆ ಆಜಾನ್ ಕೂಗುವಂತೆ ನಿರ್ದೇಶನ ನೀಡಬೇಕು. ನಿಯಮ ಉಲ್ಲಂಘಿಸುವ ಮಸೀದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜೀವನ್ ಮನವಿ ಮಾಡಿದರು.
ಈ ಬಗ್ಗೆ ತಹಶೀಲ್ದಾರ್ ಗೋವಿಂದರಾಜು ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಭಜರಂಗಳದ ಪ್ರಮುಖರಾದ ಕಿಬ್ಬೆಟ್ಟ ಮಧು, ಪ್ರಚಾರ ಪ್ರಮುಖ್ ಪ್ರದೀಪ್, ಶರತ್ಚಂದ್ರ, ಕಾಮತ್, ಭುವನ್, ಸುಪ್ರಿತ್, ಸ್ಪಂದನ್, ಮಾತೃಮಂಡಳಿ ಸಂಚಾಲಕಿ ಪವಿತ್ರ, ಗೀತಾ ಸೇರಿದಂತೆ ಇತರರು ಇದ್ದರು.