ಮಡಿಕೇರಿ, ಏ. ೨೦: ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿAಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ. ಸಿಪೆಟ್ ಸಂಸ್ಥೆಯು ಭಾರತ ಸರ್ಕಾರದ ರಸಾಯನ ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯ ೨೦೨೨-೨೩ನೇ ಸಾಲಿನ ಉದ್ಯೋಗಾದರಿತ ಮತ್ತು ಶೇ. ೧೦೦ ಉದ್ಯೋಗ ಖಚಿತ ಡಿಪ್ಲೊಮಾ, ಪೋಸ್ಟ್ ಗ್ರ‍್ಯಾಜುಯೇಟ್ ಡಿಪ್ಲೋಮಾ ಕೋರ್ಸ್ಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ(ಡಿಪಿಟಿ), ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (ಡಿಪಿಎಂಟಿ) ೩ ವರ್ಷ ಮತ್ತು ಪೋಸ್ಟ್ ಗ್ರ‍್ಯಾಜುಯೇಟ್ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಪ್ರೊಸೆಸ್ಸಿಂಗ್ ಮತ್ತು ಟೆಸ್ಟಿಂಗ್ (ಪಿಜಿಡಿ-ಪಿಪಿಟಿ) ೨ ವರ್ಷ, ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕರು ಮತ್ತು ಮುಖ್ಯಸ್ಥರಾದ ಆರ್.ಟಿ.ನಾಗರಳ್ಳಿ ಅವರು ತಿಳಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ, ಪಿಯುಸಿ (ವಿಜ್ಞಾನ) ಮತ್ತು ಬಿಎಸ್‌ಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರು, ಹಾಜರಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜೂನ್ ೫ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ hಣಣಠಿs://ಛಿiಠಿeಣ೨೦೨೨. oಟಿಟiಟಿeಡಿegisಣಡಿಚಿಣioಟಿ ಜಿoಡಿm.oಡಿg/ಅIPಇಖಿ/ ಅಥವಾ ದೂ: ೦೮೨೧-೨೫೧೦೬೧೮/ ೯೭೯೧೪೩೧೮೨೭, ೯೪೬೬೫೮೫೬೬೯, ೯೪೮೦೨೫೩೦೨೪. Websiಣe: ತಿತಿತಿ.ಛಿiಠಿeಣ.gov.iಟಿ. ನ್ನು ಸಂಪರ್ಕಿಸಬಹುದು ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕರು ಮತ್ತು ಮುಖ್ಯಸ್ಥರು ತಿಳಿಸಿದ್ದಾರೆ.