ಮಡಿಕೇರಿ, ಏ. ೨೦: ಅನಾದಿಕಾಲದಿಂದಲೂ ನಮ್ಮ ಹಿರಿಯರು ಕಾಪಾಡಿಕೊಂಡು ಬಂದಿರುವ ಪಾರಂಪರಿಕ ಹಿರಿಮೆಯನ್ನು ಅನುಸರಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇಂದಿನ ಪೀಳಿಗೆಗಿದೆ ಎಂದು ಯುನೈಟೆಡ್ ಕೊಡವ ಆರ್ಗನೈಜೇಷನ್ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹೇಳಿದರು. ಇತ್ತೀಚೆಗೆ ಮೂರ್ನಾಡು ಕೊಡವ ಸಮಾಜದಲ್ಲಿ ಅಲ್ಲಿನ ಶ್ರೀ ಆದಿಕಾವೇರಿ ಕೊಡವ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಕೊಡವರ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ವ್ಯವಸ್ಥೆಯು ವೈಜ್ಞಾನಿಕ ಹಿನ್ನೆಲೆಯೊಂದಿಗೆ ರೂಪಿಸಲ್ಪಟ್ಟಿದ್ದು, ಕೊಡವ ಜನಾಂಗ ಪ್ರಪಂಚದ ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ ರಾಜಕೀಯ ಶೋಷಣೆಗೆ ಒಳಪಟ್ಟ ಹಾಗೂ ಅತೀಹೆಚ್ಚು ಹತ್ಯಾಕಾಂಡಗಳನ್ನು ಎದುರಿಸಿದ ಜನಾಂಗವಾಗಿದೆ ಎಂದು ಹೇಳಿದರು. ಇದೀಗ ಅಳಿದುಳಿದು ಅಲ್ಪಸಂಖ್ಯಾತರಾಗಿ ಸ್ವಯಂ ಬದುಕು ಕಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲಿಯೂ ಸಹ ಸಾಂಸ್ಕೃತಿಕವಾಗಿ ಹಾಗೂ ಪಾರಂಪರಿಕವಾಗಿ ಕೊಡವರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಹಿರಿಯರು ಕಾಪಾಡಿಕೊಂಡು ಬಂದಿರುವ ಪಾರಂಪರಿಕ ಹಾಗೂ ಸಾಂಸ್ಕೃತಿಕ ನಂಬಿಕೆಯ ಕಟ್ಟುಪಾಡುಗಳು ಮಾತ್ರವೇ ನಮ್ಮನ್ನು ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಬಲಿಷ್ಠರನ್ನಾಗಿಸಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು. ಸಭೆಯ ಅಧ್ಯಕ್ಷತೆಯನ್ನು ಮಂಡೇಪAಡ ಅಯ್ಯಪ್ಪ ವಹಿಸಿದ್ದರು, ವೇದಿಕೆಯಲ್ಲಿ ನಿವೃತ್ತ ಪ್ರೊಫೇಸರ್ ಪಾಂಡAಡ ಸೋಮಯ್ಯ, ಬಡುವಂಡ ಸೀತಾದೇವಿ ಉಪಸ್ಥಿತರಿದ್ದರು.
ಯುಕೊ ಸಂಘಟನೆಯ ನೆಲ್ಲಮಕ್ಕಡ ಮಾದಯ್ಯ, ಪುದಿಯೊಕ್ಕಡ ದಿನೇಶ್, ಮಚ್ಚಾಮಾಡ ರಮೇಶ್, ಬೊಳ್ಳಚೆಟ್ಟಿರ ಮೈನಾ ಪ್ರಕಾಶ್, ಕುಂಜಿಲAಡ ಗ್ರೇಸಿ ಪೂಣಚ್ಚ ಹಾಜರಿದ್ದರು. ಪಂದ್ಯAಡ ರಮೇಶ್ ಸ್ವಾಗತಿಸಿ, ವಂದಿಸಿದರು.