ವೀರಾಜಪೇಟೆ, ಏ. ೧೯: ಅಮ್ಮನ ಬುದ್ಧಿ ಮಾತುಗಳಿಂದ ಬೇಸರಗೊಂಡ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೀನುಪೇಟೆಯಲ್ಲಿ ನಡೆದಿದೆ. ಮೀನುಪೇಟೆ ನಿವಾಸಿ, ಬಳೆ ವ್ಯಾಪಾರಿಗಳಾದ ಆರ್. ಹೇಮಾವತಿ ಎಂಬವರÀ ದ್ವಿತೀಯ ಪುತ್ರ ಆರ್.ಅರುಣ್ ಕುಮಾರ್ (೨೨) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ.
ಹೇಮಾವತಿ ಅವರ ಎರಡು ಗಂಡು ಮಕ್ಕಳಾದ ಅಭಿಷೇಕ್ ಮತ್ತು ಅರುಣ್‌ಕುಮಾರ್ ಮೈಸೂರಿನಲ್ಲಿ ಸ್ಪೋರ್ಟ್ಸ್ ಅಂಗಡಿ ಮಳಿಗೆಯನ್ನು ನಡೆಸುತ್ತಿದ್ದಾರೆ. ಎರಡು ದಿನಗಳ ಹಿಂದೆ ದ್ವಿತೀಯ ಪುತ್ರ ಅರುಣ್ ಕುಮಾರ್ ವೀರಾಜಪೇಟೆಯ ಸ್ವಗೃಹಕ್ಕೆ ಬಂದಿದ್ದಾನೆ.
(ಮೊದಲ ಪುಟದಿಂದ) ಮನೆಯಲ್ಲಿ ನಾನು ಮೈಸೂರಿನಲ್ಲಿ ಇರುವುದಿಲ್ಲ. ಇಲ್ಲೇ ಅಂಗಡಿಯನ್ನು ಹೊಂದಿಸಿ ಕೊಡಿ ಎಂದು ತಾಯಿಯ ಬಳಿ ಕೇಳಿಕೊಂಡಿದ್ದಾನೆ. ಈ ವೇಳೆ ಮೈಸೂರಿನಲ್ಲಿಯೇ ವ್ಯಾಪಾರ ಮಾಡಿಕೊಂಡು ಉತ್ತಮ ಜೀವನ ಸಾಗಿಸು, ವೀರಾಜಪೇಟೆಯಲ್ಲಿ ನಿರೀಕ್ಷಿತ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ ಎಂದು ಹೇಮಾವತಿ ಬುದ್ಧಿಮಾತು ಹೇಳಿದ್ದಾರೆ ಎನ್ನಲಾಗಿದೆ.
ತಾ. ೧೮ ರಂದು ಅರುಣ್‌ಕುಮಾರ್ ಬೆಳಿಗ್ಗೆ ಎಂದಿನAತೆ ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪದ ಬಳೆ ಅಂಗಡಿಗೆ ತಾಯಿಯೊಂದಿಗೆ ತೆರಳಿ ಅಂಗಡಿಯಲ್ಲಿ ಅಮ್ಮನಿಗೆ ಸಹಾಯ ಮಾಡಿದ್ದಾನೆ. ನಂತರದಲ್ಲಿ ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ಜೆರಾಕ್ಸ್ ಮಾಡಿ ಬರುತ್ತೇನೆ ಎಂದು ತಾಲೂಕು ಕಚೇರಿಗೆ ತೆರಳಿ ಮನೆಗೆ ಹಿಂತಿರುಗಿದ್ದಾನೆ ಎನ್ನಲಾಗಿದೆ. ಮಧ್ಯಾಹ್ನ ಮನೆಗೆ ಬಂದ ಹೇಮಾವತಿ ಅವರು ಊಟ ಮುಗಿಸಿ ಅಂಗಡಿಗೆ ತೆರಳಿದ್ದಾರೆ. ರಾತ್ರಿ ಸುಮಾರು ೮ ಗಂಟೆಗೆ ಹೇಮಾವತಿ ಅವರು ಮನೆಗೆ ಬಂದ ಸಂದರ್ಭ ಮನೆಯ ಬಾಗಿಲನ್ನು ಒಳಗಿನಿಂದ ಭದ್ರಪಡಿಸಲಾಗಿತ್ತು. ಕೂಗಿ ಕರೆದರೂ ಕರೆಗಂಟೆ ಬಾರಿಸಿದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಕಿಟಕಿಯಿಂದ ಬಾಗಿಲನ್ನು ತೆಗೆದು ಒಳನುಗ್ಗಿದ್ದಾರೆ. ಮನೆಯ ಕೋಣೆಯೊಂದರಲ್ಲಿ ಅರುಣ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಹೇಮಾವತಿ ಅವರು ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.